ಮಣಿಯ ವೆಜ್ಜದಲ್ಲಿ ಎಯ್ದುವ ರಜ್ಜು,
ಮೊನೆ ಮಣಿದಲ್ಲಿ ನಿಂದಿತ್ತು.
ಅದರಿರವು ಲಕ್ಷಿಸುವ ಲಕ್ಷ್ಯದಲ್ಲಿ ಅಲಕ್ಷ್ಯಮಯ
ಅಭಿಮುಖವಾಗಲಾಗಿಸಿಕ್ಕಿತ್ತು,
ಮಾಡುವ ಸತ್ಕ್ರೀ ವಸ್ತುವ ಮುಟ್ಟಲಿಲ್ಲದೆ
ಇಂತೀ ಯುಗಳ ನಾಮವಳಿದು ಲಕ್ಷ್ಯಅಲಕ್ಷ್ಯಕ್ಕೆ ಬೆಚ್ಚಂತಿರಬೇಕು.
ಬೆಸುಗೆಯ ನಡುವೆ ಬೆಳಗುತ್ತದೆ, ಸದಾಶಿವಮೂರ್ತಿಲಿಂಗ.
Art
Manuscript
Music
Courtesy:
Transliteration
Maṇiya vejjadalli eyduva rajju,
mone maṇidalli nindittu.
Adariravu lakṣisuva lakṣyadalli alakṣyamaya
abhimukhavāgalāgisikkittu,
māḍuva satkrī vastuva muṭṭalillade
intī yugaḷa nāmavaḷidu lakṣya'alakṣyakke beccantirabēku.
Besugeya naḍuve beḷaguttade, sadāśivamūrtiliṅga.