ಅಂಗವ ಮರೆದು ಲಿಂಗವನರಿಯಬೇಕೆಂಬರು,
ಕರಣಂಗಳರತು ಘನಲಿಂಗವನರಿಯಬೇಕೆಂಬರು.
ಅದು ನಾನಿಕ್ಕಿದ ತಡೆ ಕೇಳಿರಣ್ಣಾ.
ಆಕಾಶ ಬಯಲಾದಡೆ ಮುಗಿಲು
ರೂಪ ತೋರಿ ಅಳಿವ ಪರಿಯಿನ್ನೆಂತೊ?
ನಕ್ಷತ್ರ ಚಂದ್ರ ಸೂರ್ಯಾದಿಗಳು
ಗ್ರಹ ಪ್ರವರ್ತನವಹ ಪರಿಯಿನ್ನೆಂತೊ?
ಅವು ವಾಯುಮಯ ಆಧಾರವಾಗಿ
ತೋರುತ್ತಿಹ ನೆಮ್ಮುಗೆಯ ಇರವು.
ಅದು ಕಾರಣದಲ್ಲಿ ಅಂಗವಿದ್ದಂತೆ ಲಿಂಗವನರಿಯಬೇಕು,
ಕರಣಂಗಳಿದ್ದಂತೆ ಘನಲಿಂಗವ ಭೇದಿಸಬೇಕು.
ಹೀಗಲ್ಲದೆ ಮರೆದರಿಯಲಿಲ್ಲ, ಅರಿದು ಮರೆಯಲಿಲ್ಲ
ಉಭಯದ ಅಭಿಸಂಧಿಯಲ್ಲಿ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ.
Art
Manuscript
Music
Courtesy:
Transliteration
Aṅgava maredu liṅgavanariyabēkembaru,
karaṇaṅgaḷaratu ghanaliṅgavanariyabēkembaru.
Adu nānikkida taḍe kēḷiraṇṇā.
Ākāśa bayalādaḍe mugilu
rūpa tōri aḷiva pariyinnento?
Nakṣatra candra sūryādigaḷu
graha pravartanavaha pariyinnento?
Avu vāyumaya ādhāravāgi
tōruttiha nem'mugeya iravu.
Adu kāraṇadalli aṅgaviddante liṅgavanariyabēku,
karaṇaṅgaḷiddante ghanaliṅgava bhēdisabēku.
Hīgallade maredariyalilla, aridu mareyalilla
ubhayada abhisandhiyalli beḷagu tōruttade
sadāśivamūrtiliṅgadalli.