Index   ವಚನ - 31    Search  
 
ಅಗ್ನಿ ಅಂಗವಾಗಿ, ವಾಯು ಪ್ರಾಣವಾಗಿ, ಉಭಯ ಸಂಗದಂತಿರಬೇಕು, ಅಂಗಲಿಂಗ ಪ್ರಾಣಯೋಗ ಸಂಬಂಧ. ಅಗ್ನಿ ಮರೆದರೆ ವಾಯುವೆಚ್ಚರಿಕೆಯ ಮಾಡುವಂತೆ, ಅಗ್ನಿ ಮುಟ್ಟಿದ ಕಾಷ್ಟದೊಳಗಾದ ದ್ರವ್ಯಂಗಳು, ಹಿಂದಳ ನಾಮವುಂಟೆ? ವಸ್ತುಲೇಪವಾದ ಅಂಗಪ್ರಾಣ ಬೇರೊಂದಿದಿರಿಡಲಿಲ್ಲ. ಅಂಗಭಾವ ನಿಶ್ಚಯವಾಯಿತ್ತು, ಸದಾಶಿವಮೂರ್ತಿಲಿಂಗದಲ್ಲಿ ಲೀಯವಾಗಲಿಕ್ಕೆ.