ಬಿತ್ತದೆ ಬೆಳೆಯದೆ ತುಂಬಿದ ರಾಶಿಯ ಕಂಡಲ್ಲಿ
ಸುಖಿಯಾಗಿ ನಿಂದವರಾರೊ?
ಇದ, ಹೇಳಲೂ ಬಾರದು ಕೇಳಲೂ ಬಾರದು.
ಗುಹೇಶ್ವರಾ ನಿಮ್ಮ ಶರಣನು,
ಲಚ್ಚಣವಳಿಯದೆ ರಾಶಿಯನಳೆದನು.
Transliteration Bittade beḷeyade tumbida rāśiya kaṇḍalli
sukhiyāgi nindavarāro?
Ida, hēḷalū bāradu kēḷalū bāradu.
Guhēśvarā nim'ma śaraṇanu,
laccaṇavaḷiyade rāśiyanaḷedanu.
Hindi Translation बिना बोये बिना उपजे भरी राशी देखकर
सुखी होकर खडे कौन हैं ?
इसे नहीं कहना है, नहीं सुनना।
गुहेश्वर तुम्हारा शरण ने
लक्षणानुसार राशी को मापा।
Translated by: Eswara Sharma M and Govindarao B N
Tamil Translation விதைக்காது, விளையாது நிறைந்த குவியலைக் கண்டு
இன்பமுற்றோர் எவருளர்?
இதனைப் பற்றிக் கூறவும், கேட்கவுமியலாது
குஹேசுவரனே, உம் சரணர் பேரின்ப உணர்விற்குப்
பங்கமின்றி கெடாது துய்த்தனரன்றோ
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಳೆದನು = ಅನುಭವಿಸಿದನು; ಇದ = ಇದನ್ನು, ಈ ಲಿಂಗಸುಖವನ್ನು ಕುರಿತು; ಕಂಡಲ್ಲಿ = ಕಂಡು+ಅಲ್ಲಿ-ಅಪರೋಕ್ಷಗೊಳಿಸಿಕೊಂಡು; ಆ ಸ್ಥಿತಿಯಲ್ಲಿ; ನಿಂದವರಾರೊ = ನಿಂದವರು ಯಾರಿದ್ದಾರೆ?; ನಿಮ್ಮ ಶರಣ = ಗುಹೇಶ್ವರನೊಂದಿಗೆ ಸಮರಸಭಾವದಿಂದ ವರ್ತಿಸುವ ಶರಣ; ಬಾರದು = ಸಾಧ್ಯವಾಗದು; ರಾಶಿ = ಅನುಭವಾನಂದದ ರಾಸಿ; ರಾಶಿಯನು = ಲಿಂಗಸುಖವೆಂಬ ರಾಶಿಯನ್ನು; ಲಚ್ಚಣವಳಿಯದೆ = ಅಂಗ-ಲಿಂಗ ಸಮರತಿಯ ಭಾವಕ್ಕೆ ಭಂಗತರದೆ(ಲಕ್ಕಣ-ಲಕ್ಷಣರೇಖೆ, ರಾಶಿಯನು ಸುತ್ತುವರೆಯುವ ಲಕ್ಷಣ ರೇಖೆ.
ಲಿಂಗಸುಖವೆಂಬುದು ರಾ; ಸುಖಿಯಾಗಿ = ಪರಮಸುಖಿಯಾಗಿ, ; ಹೇಳಲೂ ಕೇಳಲೂ = ಶಬ್ದಗಳ ಬಳಸಿ ಹೇಳುವುದಾಗಲಿ, ಶಬ್ದಗಳ ಮೂಲಕ ಅನುಭವಿಸುವುದಾಗಲಿ;
Written by: Sri Siddeswara Swamiji, Vijayapura