•  
  •  
  •  
  •  
Index   ವಚನ - 404    Search  
 
ಅಂತರಂಗದಲ್ಲಿ ಭವಿಯನೊಳಕೊಂಡು, ಬಹಿರಂಗದಲ್ಲಿ ಭಕ್ತಿಯನೊಳಕೊಂಡು, ಆತ್ಮಸಂಗದಲ್ಲಿ ಪ್ರಸಾದವನೊಳಕೊಂಡು, ಇಪ್ಪ ಭಕ್ತರ ಕಾಣೆನಯ್ಯಾ ನಾನು, ಇಂತಪ್ಪ ಲಿಂಗೈಕ್ಯರ ಕಾಣೆನಯ್ಯಾ. ಅಂತರಂಗದಲ್ಲಿ ಸುಳಿದಾಡುವ ತನುಗುಣಾದಿಗಳ, ಮನಗುಣಾದಿಗಳ, ಪ್ರಾಣಗುಣಾದಿಗಳ ಕಳೆದಲ್ಲಿ ಶರಣರಹರೆ? ಬಹಿರಂದಲ್ಲಿ ತನು ಮನ ಧನವ ಕೊಟ್ಟಲ್ಲ್ಲಿಭಕ್ತರಹರೆ? ಉಂಬವರ ಕಂಡು ಕೈನೀಡಿದಡೆ ಪ್ರಸಾದಿಗಳಹರೆ? ಅಂತರಂಗ ಬಹಿರಂಗ ಆತ್ಮಸಂಗ-ಈ ತ್ರಿವಿಧದ ಭೇದವ ಗುಹೇಶ್ವರಾ ನಿಮ್ಮ ಶರಣ ಬಲ್ಲ.
Transliteration Antaraṅgadalli bhaviyanoḷakoṇḍu, bahiraṅgadalli bhaktiyanoḷakoṇḍu, ātmasaṅgadalli prasādavanoḷakoṇḍu, ippa bhaktara kāṇenayyā nānu, intappa liṅgaikyara kāṇenayyā. Antaraṅgadalli suḷidāḍuva tanuguṇādigaḷa, managuṇādigaḷa, prāṇaguṇādigaḷa kaḷedalli śaraṇarahare? Bahirandalli tanu mana dhanava koṭṭalllibhaktarahare? Umbavara kaṇḍu kainīḍidaḍe prasādigaḷahare? Antaraṅga bahiraṅga ātmasaṅga-ī trividhada bhēdava guhēśvarā nim'ma śaraṇa balla.
Hindi Translation अंतरंग में भवि अपनाकर बहिरंग में भक्ति अपनाकर आत्मसंग में प्रसाद अपनाकर ऎसे भक्तों को मैंने नहीं देखा। ऐसे लिंगैक्यों को नहीं देखा। अंतरंग में भटकते तनुगुणादियों, मनगुणादियों ,प्राणगुणादियों को छोडे तो वे शरण हैं क्या ? बहिरंग में तन मन धन दे तो भक्त हैं क्या ? खानेवालों को देख हाथ पसारे तो प्रसादी हैं क्या ? इन त्रिविध भेदों को गुहेश्वरा तुम्हारा शरण जानता। Translated by: Eswara Sharma M and Govindarao B N
Tamil Translation அகத்திலே பரத்தை நிறைத்துக் கொண்டு புறத்திலே சிறந்த பக்தனாக விளங்கி ஜீவன், பரத்தின் இணைவில் வெளிப்படும் பிரசாதத்தைப் பெற்றுக் கொண்டு உள்ள பக்தரை நான் காண வில்லை இலிங்கத்துடனொன்றிய இத்தகையோரை நான் காணவில்லை ஐயனே அகத்திலே சுழலும் உடலின் இயல்புகளை மனத்தின் இயல்புகளை பிராணனியல்புகளைக் களையின் சரணராக வியலுமோ? புறத்திலே உடல் மனம் செல்வத்தை அளிப்பின் பக்தராக வியலுமோ? உண்பவரைக் கண்டு கையை நீட்டினால் பிரசாதிகளாக இயலுமோ? இம்மூவகை வேறுபாட்டினை குஹேசுவரனே உம் சரணன் அறிவானன்றோ. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂತರಂಗದಲ್ಲಿ = ಹೃದಯಾಂತರಾಳದಲ್ಲಿ; ಆತ್ಮಸಂಗದಲ್ಲಿ = ಆತ್ಮ ಹಾಗೂ ಪರಮಾತ್ಮರ ಸಾಮರಸ್ಯದಲ್ಲಿ(ಪ್ರಕಟಗೊಳ್ಳುವ); ಇಪ್ಪ = ಹೀಗೆ ಇರುವ; ಈ ತ್ರಿವಿಧ ಭೇದವ = ಈ ಶರಣ, ಭಕ್ತ ಮತ್ತು ಪ್ರಸಾದಿಯಾಗುವ ಸಾಧನಾರಹಸ್ಯವನು; ಉಂಬವರ ಕಂಡು = ಉಣ್ಣುವವರ ನೋಡಿ, ಆರೋಗಣೆಗೆ ಕುಳಿತ ಗುರು-ಜಂಗಮರ ನೋಡಿ; ಒಳಕೊಂಡು = ತುಂಬಿಕೊಂಡು(ಇರಬೇಕು); ಒಳಕೊಂಡು = ಪಡೆದುಕೊಂಡು, ಸ್ವೀಕರಿಸಿ(ಇರಬೇಕು); ಕಳೆದಲ್ಲಿ = ಕಳೆದುಕೊಂಡಲ್ಲಿ,; ಕಾಣೆನಯ್ಯಾ = ಕಾಣುವುದೇ ಕಷ್ಟ; ಕೈಯ ನೀಡಿದಡೆ = ಅವರ ಎದುರು ಕೈಚಾಚಿ ಪ್ರಸಾದವನು ಸ್ವೀಕರಿಸಿದರೆ; ತನುಗುಣ = ತನುವಿಗೆ ಸಂಬಂಧಿಸಿದ ಜನ್ಮ-ಮರಣ ಮುಂತಾದವುಗಳು; ನಿಮ್ಮ ಶರಣ ಬಲ್ಲ = ನಿಮ್ಮ ಶರಣನೇ ಬಲ್ಲನು; ಪ್ರಸಾದವನು = ಪರಮಸುಖವನು; ಪ್ರಸಾದಿಗಳಹರೆ? = ಪ್ರಸಾದಿಗಳಾದಾರೆಯೆ?; ಪ್ರಾಣಗುಣ = ಪ್ರಾಣಕ್ಕೆ ಸಂಬಂಧಿಸಿದ ಹಸಿವು-ತೃಷೆ ಮುಂತಾದುವುಗಳು; ಬಹಿರಂಗದಲ್ಲಿ = ಹೊರಗೆ, ಕಾಯಸ್ಥಲದಲ್ಲಿ; ಭಕ್ತರ = ಪರಮ ಭಕ್ತರನ್ನು; ಭಕ್ತಿಯನೊಳಕೊಂಡು = ಭಕ್ತಿಸಂಪನ್ನವಾಗಿ(ಇರಬೇಕು); ಭವಿಯನು = ಪರಮಾತ್ಮನನ್ನು, ಲಿಂಗವನ್ನು; ಮನಗುಣ = ಮನಸ್ಸಿಗೆ ಸಂಬಂಧಿಸಿದ ಸಂಕಲ್ಪ-ವಿಕಲ್ಪಾದಿಗಳು; ಲಿಂಗೈಕ್ಯರ = ಲಿಂಗಾಂಗ ಸಾಮರಸ್ಯ ಪಡೆದ ಲಿಂಗೈಕ್ಯರನ್ನು; ಶರಣರಹರೆ? = ಶರಣರಾದಾರೆಯೆ?; Written by: Sri Siddeswara Swamiji, Vijayapura