ಪ್ರಾಣಕ್ಕೆ ಉಪದೇಶವ ಮಾಡಿ, ಕಾಯಕ್ಕೆ ಲಿಂಗವ ಕೊಡಬೇಕು,
ಕಾಯಶುದ್ಧವ ಮಾಡಿ ಪ್ರಾಣಕ್ಕೆ ಅರಿವ ತೋರಬೇಕು.
ಇಷ್ಟನರಿಯದೆ ದೀಕ್ಷೆಯ ಮಾಡಬಾರದು.
ಕುರುಡನ ಕೈಯ್ಯಲ್ಲಿ ಕೂಳಕಲಸಿ,
ಪ್ರತಿ ಕುರುಡಂಗೆ ಊಡಿಸಿದಂತಾಯಿತ್ತು.
ಮಲಭಾಂಡ ಜೀವಿಯ ಕೈಯಲ್ಲಿ ಅನುಜ್ಞೆಯಾದ ಶಿಷ್ಯಂಗೆ
ಉಭಯದ ಕೇಡಾಯಿತ್ತು, ಇದನರಿತು ನಡೆಯಿರಣ್ಣಾ,
ಸದಾಶಿವಮೂರ್ತಿಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Prāṇakke upadēśava māḍi, kāyakke liṅgava koḍabēku,
kāyaśud'dhava māḍi prāṇakke ariva tōrabēku.
Iṣṭanariyade dīkṣeya māḍabāradu.
Kuruḍana kaiyyalli kūḷakalasi,
prati kuruḍaṅge ūḍisidantāyittu.
Malabhāṇḍa jīviya kaiyalli anujñeyāda śiṣyaṅge
ubhayada kēḍāyittu, idanaritu naḍeyiraṇṇā,
sadāśivamūrtiliṅgavanarivudakke.