Index   ವಚನ - 43    Search  
 
ಅಂಗದ ಮೇಲೆ ಲಿಂಗವಿಲ್ಲದೆ ವಿಭೂತಿ ರುದ್ರಾಕ್ಷಿಯ ಧರಿಸಲಾಗದು. ಅದೆಂತೆಂದಡೆ: ಸತಿಪುರುಷರಿಗೆ ಸಂಯೋಗವಲ್ಲದೆ, ಸತಿ ಸತಿಗೆ, ಪುರುಷ ಪುರುಷಗೆ ಸಂಯೋಗವುಂಟೆ? ಅಂಗಹೀನಂಗೆ ಹಿಂಗದ ನವರಸವುಂಟೆ ಅಯ್ಯಾ? ಇಂತೀ ಲಿಂಗಬಾಹ್ಯಂಗೆ ವಿಭೂತಿಯ ಪಟ್ಟವೆಂದು ಕಟ್ಟಿದ ಗುರು ಕುಂಭೀಘೋರಕ್ಕೆ ಒಳಗು, ಸದಾಶಿವಮೂರ್ತಿಲಿಂಗಕ್ಕೆ ದೂರ.