ಗುರುಮೂರ್ತಿಯ ಕಳೆ ಜಂಗಮದಲ್ಲಿಪ್ಪುದು,
ಜಂಗಮಮೂರ್ತಿಯ ಕಳೆ ಲಿಂಗದಲ್ಲಿಪ್ಪುದು,
ಆ ಲಿಂಗದ ಕಳೆ ಅರಿದು ಮಾಡುವ ಭಕ್ತನಲ್ಲಿ
ನಿತ್ಯನಿರಂಜನವಾಗಿ ಬೆಳಗುತ್ತಿಪ್ಪುದು,
ಸದಾಶಿವಮೂರ್ತಿಲಿಂಗದ ಹೃದಯವು ತಾನಾಗಿ.
Art
Manuscript
Music
Courtesy:
Transliteration
Gurumūrtiya kaḷe jaṅgamadallippudu,
jaṅgamamūrtiya kaḷe liṅgadallippudu,
ā liṅgada kaḷe aridu māḍuva bhaktanalli
nityaniran̄janavāgi beḷaguttippudu,
sadāśivamūrtiliṅgada hr̥dayavu tānāgi.