Index   ವಚನ - 53    Search  
 
ಕಾಯಕ್ಕೆ ಕರ್ಮ ಗುರುವಾಗಬೇಕು, ಜೀವಕ್ಕೆ ಮೋಕ್ಷ ಗುರುವಾಗಬೇಕು, ಉಭಯ ವೇಧಿಸಿ ನಿಂದಲ್ಲಿ ಸ್ವಾನುಭಾವ ಸನ್ನದ್ಧನಾಗಿ ಗುರುವಾಗಬೇಕು. ಆತನನುಜ್ಞೆಯಿಂದ ಬಂದ ಚಿತ್ತದ ಗೊತ್ತಿನ ಕುರುಹು, ಅದೆ ವಸ್ತು ನಿಶ್ಚಯ, ಸದಾಶಿವಮೂರ್ತಿಲಿಂಗವು ತಾನಾಗಿ.