ಇರು[ಹೆ] ಕಡೆ ಎಂಭತ್ತನಾಲ್ಕು ಲಕ್ಷ ಜೀವ
ಅವು ಹುಟ್ಟುವಾಗಲೆ ಸುಖದುಃಖ
ಭೋಗಂಗಳ ಕೊಂಡು ಹುಟ್ಟಿದವು. ಇದು ತಪ್ಪದ ದೃಷ್ಟ.
ಅರುಹಿರಿಯರೆಲ್ಲರು ಮರೆಯಬೇಡಿ.
ಅರಿವಿನ ಹೊನಲ ನೋಡಿಕೊಳ್ಳಿ.
ವೇಷಕ್ಕೆ ತಪ್ಪದಂತಾಡಿ ಹೋಗಿ,
ಪುರುಷ ಸತ್ತಡೆ ಸತಿ ಮುಂಡೆತನದಂತೆನಿಸಲಾರೆ,
ಕಳ್ಳನ ಹೆಂಡತಿಯಂತೆ ತಲ್ಲಳಿಸಲಾರೆ.
ನಿಮ್ಮ ಅರಿವಿನ ಹಾನಿ ಎನ್ನ ಇಹಪರದ ಕೇಡು.
ಈ ಪದಕ್ಕೆ ನೋಯಬೇಡ,
ನೊಂದಡೆ ಸದಾಶಿವಮೂರ್ತಿಲಿಂಗಕ್ಕೆ ಹೊರಗು