ಸಹಭೋಜನವ ಮಾಡುವನ ಇರವು ಹೇಗೆಂದಡೆ:
ದಗ್ಧಪಟದಂತೆ, ಮಂಜಿನ ರಂಜನೆಯ ವಾರಿಯ ಧೂಮದಂತೆ,
ಒಡಲಿನ ಆತ್ಮನ ಭೇದದಂತಿರಬೇಕು.
ಆಕಾಶದ ಸಾಕಾರದಲ್ಲಿ ತೋರುವ ನಾನಾ ಛಾಯದಂತೆ,
ಒಂದು ವರ್ಣದಲ್ಲಿ ನಿಲ್ಲದೆ ತೋರುವ ತೋರಿಕೆಯಂತೆ,
ಕಾಯದ ಛಾಯವ ತೊಟ್ಟಿದ್ದಲ್ಲಿ
ಲಿಂಗಕ್ಕೂ ತನಗೂ ಸಹಭೋಜನ ಸಲವುದೆಂದೆ.
ಅದು ಉರಿಯೊಳಗಳ ಕರ್ಪುರದಂತೆ,
ಕರ್ಪುರದೊಳಗಳ ಉರಿಯಂತೆ.
ಅನ್ಯಭಿನ್ನವಿಲ್ಲದಿರಬೇಕು, ಸದಾಶಿವಮೂರ್ತಿಲಿಂಗದಲ್ಲಿ.
Art
Manuscript
Music
Courtesy:
Transliteration
Sahabhōjanava māḍuvana iravu hēgendaḍe:
Dagdhapaṭadante, man̄jina ran̄janeya vāriya dhūmadante,
oḍalina ātmana bhēdadantirabēku.
Ākāśada sākāradalli tōruva nānā chāyadante,
ondu varṇadalli nillade tōruva tōrikeyante,
kāyada chāyava toṭṭiddalli
liṅgakkū tanagū sahabhōjana salavudende.
Adu uriyoḷagaḷa karpuradante,
karpuradoḷagaḷa uriyante.
An'yabhinnavilladirabēku, sadāśivamūrtiliṅgadalli.