Index   ವಚನ - 88    Search  
 
ಪಾದವ ಕೊಡುವಲ್ಲಿ ಪದಂ ನಾಸ್ತಿಯಾಗಿರಬೇಕು. ಪೂಜಿಸುವಲ್ಲಿ ಮೂರರತು, ಮೂರನರಿದು, ಆರರಲ್ಲಿ ಆಶ್ರಯಿಸಿ, ತೋರಿಕೆ ಒಂದರಲ್ಲಿ ನಿಂದು, ಆ ಒಡಲಳಿದು ಸದಾಶಿವಮೂರ್ತಿಲಿಂಗದ ಒಡಲಾಗಬೇಕು.