Index   ವಚನ - 94    Search  
 
ಒಂದಂಗಕ್ಕೆ ಮೂರು ಯುಕ್ತಿ ಭಿನ್ನವಾದಂತೆ, ಭಿನ್ನವೊಂದಂಗದಲ್ಲಿ ಕೂಡಿ ಚಕ್ಷುವಿನಲ್ಲಿ ಕಂಡು ನಡೆವಂತೆ, ಅದೆಂತೆಂದಡೆ: ನಡೆವ ಚರಣ ಗುರುಮಾರ್ಗವಾಗಿ, ಕೊಡುವ ಕರ ಚರಮಾರ್ಗವಾಗಿ, ಕೊಂಬ ಜಿಹ್ವೆ ಲಿಂಗದ ಒಡಲಾಗಿ, ನೋಡುವ ಚಕ್ಷು ತ್ರಿವಿಧವ ಕೂಡಿದ ಪರಮಪ್ರಕಾಶವಾಗಿ, ಇಂತಿವನೊಡಗೂಡಿ ಕಾಬ ಸದ್ಭಕ್ತನಂಗ ಸದಾಶಿವಮೂರ್ತಿಲಿಂಗವು ತಾನೆ.