Index   ವಚನ - 97    Search  
 
ತನ್ನಾಸೆಯ ಹರಿದು ಶಿಷ್ಯಂಗೆ ಅನುಜ್ಞೆಯ ಮಾಡಿದಾಗವೆ ಬ್ರಹ್ಮಪಾಶ ಹರಿದುದು. ವೇಷಧಾರಿಗಳಲ್ಲಿ ಹೋಗದೆ ಈಷಣತ್ರಯವ ಬಿಟ್ಟು ನೆರೆ ಈಶನನರಿತುದೆ ಆ ಭಕ್ತಂಗೆ ವಾಸವನ ಲೇಸಕಿತ್ತುದು. ಇಂತೀ ಗುರುಚರದ ಉಭಯವನರಿತ ಸದ್ಭಕ್ತನ ಶರೀರವು ಸದಾಶಿವಮೂರ್ತಿಲಿಂಗವು ತಾನೆ.