Index   ವಚನ - 112    Search  
 
ಊರ ಬಾಗಿಲ ಕಂಬದಲ್ಲಿ ಮೂರು ಮುಖದ ಕೋಡಗ ಬಂದವನಿವನಾರೆಂದು ನೋಡುತ್ತ, ಮತ್ತೊಂದು ಮುಖ ನಿಂದವನ ಏಡಿಸುತ್ತ, ಮತ್ತೊಂದು ಮುಖ ಹಿಂದೆ ಒಂದಿದವನ ನೆನೆವುತ್ತ, ಇಂತೀ ಮೂರು ಚಂದ, ಹಿಂದಳ ಅಧೋಮುಖಕ್ಕೆ, ನಡುವಳ ಅಭಿಮುಖಕ್ಕೆ, ಕಡೆಯ ಊರ್ಧ್ವಮುಖಕ್ಕೆ ಕುಂಡಲಿಯ ಹಾವೆದ್ದು ಕೋಡಗವ ಒಂದೆ ಬಾರಿ ನುಂಗಿತ್ತು. ಸದಾಶಿವಮೂರ್ತಿಲಿಂಗವನರಿತಲ್ಲಿ.