ಮುಂದೆ ಮುನ್ನೂರರವತ್ತು ಸಾವಿರ ಯುಗ ಯುಗಂಗಳು ಬಂದಹವು.
ಹಿಂದೆ ಮುನ್ನೂರರವತ್ತು ಸಾವಿರ ಯುಗಂಗಳು ಹೋದವು.
ಇನ್ನೂ ಕೊಯ್ದಾನೆ ಪುಷ್ಪಂಗಳನು.
ಉನ್ನತನೆಂಬ ಗಣೇಶ್ವರನ ಕರಡಗೆ ತುಂಬದು ನೋಡಾ!
ಇನ್ನೂ ಕೊಯ್ದಾನೆ ಪುಷ್ಪಂಗಳನು!
ಆ ಕುಲಗಿರಿಗೆ ಮೇರುಗಿರಿ ಘನವೆಂದರಿಯರು.
ಗುಹೇಶ್ವರಾ, ನಿಮ್ಮ ಶರಣನ ಮಹಿಮೆಯ
ಹರಿಬ್ರಹ್ಮಾದಿ ದೇವತೆಗಳು ಯಾರು ಅರಿಯರು.
Hindi Translationपीछे तीन सौ साट हजार युग बीते ।
आगे तीन सौ साट हजार युग बी ते।
और भी फूलों को चुन रहा है।
उन्नत जैसे गणेश्वर की करंडक न भरा।
और भी चुन रहा है पुष्पों को-
उस कुल गिरि को मेरु गिरि समन समझ्ते।
गुहेश्वरा ,तुम्हारी महिमा हरिब्रह्मादि न जानते।
Translated by: Eswara Sharma M and Govindarao B N
English Translation
Tamil Translationமுன்பு எண்ணற்ற யுகங்கள் அகன்றன.
இன்னும் எண்ணற்ற யுகங்கள் அகலும்
மலர்களை இன்னும் கொய்கிறான். சிறந்த
கணேசுவரனின் கூடை நிறையாது
மலர்களை இன்னும் கொய்கிறான்.
சிறிய குன்றைவிட மேருமலை சிறந்ததென அறியார்
குஹேசுவரனே, உம்முடைய பெருமையை
ஹரி, பிரம்மர் போன்றோரும் அறியாரன்றோ
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಇನ್ನೂ ಕೊಯ್ದಾನೆ = ಇನ್ನೂ ಪುಷ್ಪಗಳನೆತ್ತಿ ಅರ್ಪಿಸಿ ಪೂಜಿಸುತ್ತಲಿದ್ದಾನೆ; ಉನ್ನತನೆಂಬ ಗಣೇಶ್ವರ = ಶ್ರೇಷ್ಠ, ಶಿವಭಕ್ತ, ನಾನು ಭಕ್ತ, ಶಿವ ನನ್ನ ದೈವತ-ಎಂಬ ಭಿನ್ನಭಾವವಿಡಿದ ಭಕ್ತ; ಕರಡಗೆ = ಪುಷ್ಪದ ಬುಟ್ಟಿ; ಕುಲಗಿರಿ = ಚಿಕ್ಕ ಚಿಕ್ಕ ಪರ್ವತಗಳು; ಘನ = ಶ್ರೇಷ್ಠ, ಮಹಿಮ, ಹಿರಿಮೆ-ಗರಿಮೆ; ತುಂಬುದು = ತುಂಬುತ್ತಿಲ್ಲ; ಮೇರುಗಿರಿ = ಅತ್ಯಂತ ಎತ್ತರವಾದ, ಅತ್ಯದ್ಭುತವಾದ ಹೇಮಾದ್ರಿ; Written by: Sri Siddeswara Swamiji, Vijayapura