•  
  •  
  •  
  •  
Index   ವಚನ - 410    Search  
 
ಅಂಗದ ಮೇಲೆ ಲಿಂಗಸಂಬಂಧವಾದ ಬಳಿಕ, ಪ್ರಾಣದ ಮೇಲೆ ಜ್ಞಾನ ನಿರ್ಧಾರವಾಯಿತ್ತು ನೋಡಾ. ಒಳಗು ಹೊರಗು ಹೊರಗು ಒಳಗೆಂಬ ಉಭಯವು ಏಕಾರ್ಥವಾಯಿತ್ತು, ಇದು ಕಾರಣ ಎನ್ನ ಅಂತರಂಗ ಬಹಿರಂಗ ಸರ್ವಾಂಗವನೊಳಕೊಂಡು ನೀನೆಪ್ಪೆಯಾಗಿ ನಾನೀಂಬ ಭೇದವುಂಟೆ ಗುಹೇಶ್ವರಾ.
Transliteration Aṅgada mēle liṅgasambandhavāda baḷika, prāṇada mēle jñāna nirdhāravāyittu nōḍā. Oḷagu horagu horagu oḷagemba ubhayavu ēkārthavāyittu, idu kāraṇa enna antaraṅga bahiraṅga sarvāṅgavanoḷakoṇḍu nīneppeyāgi nānīmba bhēdavuṇṭe guhēśvarā.
Hindi Translation शरीर पर लिंग संबंध हो जाने पर प्राण पर ज्ञान निर्धारित हुआ था देखो। अंदर बाहर दोनों एक बन गया, गुहेश्वरा, तुम में समाने से! Translated by: Eswara Sharma M and Govindarao B N
Tamil Translation உடலுடன் இலிங்கத் தொடர்பு ஏற்பட்டவுடன் பிராணனிடம் ஞானம் நிலைத்தது காணாய் அகம், புறமெனும் இரண்டும் ஒன்றானதால் குஹேசுவரனே, உம்மில் இணைந்தேனன்றோ. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗ = ಸ್ಥೂಲಾದಿ ದೇಹ; ಏಕಾರ್ಥವಾಯಿತ್ತು = ಏಕೈಕವಾದ ಲಿಂಗದಿಂದ ತುಂಬಿಹೋಯಿತ್ತು; ಒಳಹೊರಗೆಂಬ ಉಭಯ = ಅಂತರಂಗ-ಬಹಿರಂಗಗಳೆರಡು; ಜ್ಞಾನ = ಲಿಂಗವೇ ನಾನು, ಶಿವೋsಹಂ ಎಂಬ ಪ್ರಜ್ಞೆ; ನಿಮ್ಮ ನೆರೆದನಾಗಿ = ನಿಮ್ಮಲ್ಲಿ, ಮಹಾಲಿಂಗದಲ್ಲಿ ಒಂದುಗೂಡಿದೆನಾಗಿ; ನಿರ್ಧರವಾಗು = ಗಟ್ಟಿಗೊಳ್ಳು, ಅನುಭವದ ರೂಪತಾಳು; ಪ್ರಾಣ = ಜೀವಾತ್ಮ; ಲಿಂಗ = ಇಷ್ಟಾದಿ ಲಿಂಗ; ಸಂಬಂಧವಾಗು = ಸಂಬಂಧಗೊಳ್ಳು; Written by: Sri Siddeswara Swamiji, Vijayapura