•  
  •  
  •  
  •  
Index   ವಚನ - 413    Search  
 
ಹೂ ಕೊಯ್ಯಹೋದಡೆ ಹೂ ದೊರಕೊಳ್ಳವು. ಅಗ್ಘವಣಿಯ ತುಂಬುವಡೆ ಅಗ್ಘವಣಿ ತುಂಬದು. ಪೂಜಿಸ ಹೋದಡೆ ಪೂಜೆ ನೆಲೆಗೊಳ್ಳದು. ಇದೇನು ಸೋಜಿಗವೊ ಅಯ್ಯಾ! ಅರಿದು ಮರೆದವನಲ್ಲ, ಬೆರಗು ಹಿಡಿದವನಲ್ಲ. ಗುಹೇಶ್ವರನೆಂಬ ಬುದ್ಧಿ ಇಂತುಟು.
Transliteration Hū koyyahōdaḍe hū dorakoḷḷavu. Agghavaṇiya tumbuvaḍe agghavaṇi tumbadu. Pūjisa hōdaḍe pūje nelegoḷḷadu. Idēnu sōjigavo ayyā! Aridu maredavanalla, beragu hiḍidavanalla. Guhēśvaranemba bud'dhi intuṭu.
Hindi Translation फूल चुनना गये तो फूल नहीं मिलता। पवित्र जल भरने गये तो पवित्र जल नहीं भरता। पूजा करने गये तो पूजा पूर्ण नहीं होति। यह क्या आश्चर्य है अय्या। जानकर भूलनेवाला नहीं, भ्रांत नहीं हुआ, गुहेश्वर जैसी बुद्धि इस तरह है। Translated by: Eswara Sharma M and Govindarao B N
Tamil Translation மலரைக் கொய்யச் சென்றால் மலர் கைக்கு வருவதில்லை புனித நீரை நிறைக்கச் சென்றால், நீர் நிறைவதில்லை பூஜிக்கச் சென்றால், பூஜை நிலை கொள்வதில்லை இது என்ன வியப்பு ஐயனே! அறிந்து மறந்தவரில்லை, மருளடைந்தவருமன்று குஹேசுவர ஞானம் இத்தன்மைத் தன்றோ. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಗ್ಗವಣಿ ತುಂಬದು = ಆ ಜಲ ಲಕಶದಲ್ಲಿ ತುಂಬುತ್ತಲೇ ಇಲ್ಲ; ಅಗ್ಗವಣಿಯ = ಪವಿತ್ರ ಜಲವನ್ನು; ಇದೇನು ಸೋಜಿಗವೂ = ಇದೆಂಥ ಅಚ್ಚರಿಯ ಸಂಗತಿ; ಕೊಯ್ಯಹೋದಡೆ = ಕೊಯ್ಯಲು, ಎತ್ತಲು ಹೋದರೆ; ತುಂಬುವಡೆ = ತುಂಬಲು ಹೋದರೆ; ದೊರೆಕೊಳ್ಳದು = ಕೈಗೆ ಬರದು(ಹಾಗೂ); ಪೂಜಿಸಹೋದಡೆ = ಅಷ್ಟೋಪಚಾರಗಳಿಂದ ಅರ್ಚಿಸಲು ಹೋದರೆ; ಪೂಜೆ ನೆಲೆಗೊಳ್ಳದು = ಆ ಪೂಜೆ ಮುಂದುವರಿಯುತ್ತಲೇ ಇಲ್ಲ; ಹೂವ = ಹೂವನ್ನು; Written by: Sri Siddeswara Swamiji, Vijayapura