ಶರಣ, ಲಿಂಗಾರ್ಚನೆಯ ಮಾಡಲೆಂದು
ಪುಷ್ಪಕ್ಕೆ ಕರವ ನೀಡಿದಡೆ,
ಆ ಪುಷ್ಪ ನೋಡಾ ನೋಡಾ ಕರದೊಳಡಗಿತ್ತಲ್ಲಾ!
ಅದು ಓಗರದ ಗೊಬ್ಬರವ ನುಣ್ಣದು;
ಕಾಮದ ಕಣ್ಣರಿಯದು, ನಿದ್ರೆಯ ಕಪ್ಪೊತ್ತದು.
ಅದು ಅರುಣ ಚಂದ್ರ[ರ] ಧರೆಯಲ್ಲಿ ಬೆಳೆಯದು.
ಲಿಂಗವೇ ಧರೆಯಾಗಿ ಬೆಳೆದ ಪುಷ್ಪವನು ಗುಹೇಶ್ವರಾ
ಎಂದೆಂದಿಗೆಯೂ ನಿರ್ಮಾಲ್ಯವಿಲ್ಲೆಂದು
ನಿಮ್ಮ ಶರಣನು ಪ್ರಾಣಲಿಂಗಕ್ಕೆ ಪೂಜೆಯ ಮಾಡಿದನು.
Transliteration Śaraṇa, liṅgārcaneya māḍalendu
puṣpakke karava nīḍidaḍe,
ā puṣpa nōḍā nōḍā karadoḷaḍagittallā!
Adu ōgarada gobbarava nuṇṇadu;
kāmada kaṇṇariyadu, nidreya kappottadu.
Adu aruṇa candra[ra] dhareyalli beḷeyadu.
Liṅgavē dhareyāgi beḷeda puṣpavanu guhēśvarā
endendigeyū nirmālyavillendu
nim'ma śaraṇanu prāṇaliṅgakke pūjeya māḍidanu.
Hindi Translation शरण लिंगार्चन करते पुष्प को हाथ पसारे तो,
वह पुष्प देखते देखते कर में समा गया!
वह आहार का गोबर नहीं खाता।
चाहकी पूजा न चाहता , अज्ञान का काला नहीं छूता।
वह अरुणचंद्र की आड में न पलता!
लिंगवेदी बने पुष्प को
गुहेश्वरा, तुम्हारा शरण ने प्राणलिंग की पूजा की।
Translated by: Eswara Sharma M and Govindarao B N
Tamil Translation சரணன் இலிங்கத்தைப் பூஜிக்க மலருக்காக கையை நீட்டிட
அம்மலர் காணக்காண கையிலடங்கியதன்றோ!
அது விளைச்சலிற்கு வேண்டிய உரத்தை உண்ணாது
பற்றுடன் கூடிய உணர்வை யறியாது
உறக்கத்தின் காரிருள் அதனைத் தீண்டாது
அது சூரியசந்திரரின் ஒளியிலே விளையாது.
இலிங்க ஞானமெனும் அமுதத்தைப் பருகி மலர்ந்த மலரை
குஹேசுவரனே, உம் சரணன் இறைவனுக்கு
அர்ப்பித்துப் பூஜை செய்தனனன்றோ!
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಡಗಿತ್ತು = ವಶವಾಗಿತ್ತು, ಕಾಣಬಂದಿತ್ತು; ಅದು = ಆ ಸದ್ಭಾವ ಪುಷ್ಪವು; ಅರಿಯದು = ಸ್ಪರ್ಶಿಸದು; ಅರುಣಚಂದ್ರರ ತೆರೆಯಲ್ = ರವಿ-ಶಶಿಗಳ ಪ್ರಕಾಶದಲಿ; ಆ ಪುಷ್ಪ = ಪ್ರಾಣ ಲಿಂಗಕ್ಕೆ ಪ್ರಿಯವಾದ ಆ ಸದ್ಭಾವ ಪುಷ್ಪ(ಆನಂದ ಭಕ್ತಿಭಾವ ಪುಷ್ಪ); ಉಣ್ಣದು = ಸ್ವೀಕರಿಸದು; ಒತ್ತದು = ಅದನ್ನು ಮುಟ್ಟದು; ಓಗರದ ಗೊಬ್ಬರವನು = ಆಹಾರವಾಗಿ ಬೇಕಾಗುವ ಗೊಬ್ಬರವನು; ಕರದೊಳಗೆ = ಆ ಸುಜ್ಞಾನ ಹಸ್ತದಲ್ಲಿ; ಕರವ ನೀಡಿದಡೆ = ಕರವನ್ನು ಚಾಚಿದೊಡೆ, ಸುಜ್ಞಾನವೆಂಬ ಹಸ್ತವನು ಹರವಿದರೆ; ಕಾಮದ ಕಣ್ಣು = ಸಕಾಮ ಭಾವನೆಯು; ನಿದ್ರೆಯ ಕಪ್ಪು = ನಿದ್ರೆಯೊಳಗಿರುವ ತಮಸ್ಸು, ಅಜ್ಞಾನವೆಂಬ ಅಂಧಕಾರ; ನಿಮ್ಮ ಶರಣ = ಶರಣಸ್ಥಲಿಯು; ನೋಡನೋಡ = ನೋಡುನೋಡುತ್ತಲೆ; ಪುಷ್ಪಕ್ಕೆ = ಪುಷ್ಪವನೆತ್ತಿಕೊಳ್ಳಲು; ಪೂಜೆಯ ಮಾಡಿದನು = ಅರ್ಚಿಸಿದನು; ಪ್ರಾಣಲಿಂಗಕ್ಕೆ = ಪರಮಾತ್ಮಂಗೆ ಅರ್ಪಿಸಿ; ಬೆಳೆದ ಪುಷ್ಪವನು = ಬೆಳೆದ, ಅರಳಿದ ಆ ಪವಿತ್ರಸದ್ಭಾವ ಪುಷ್ಪವನು; ಬೆಳೆಯದು = ಅದು ಬೆಳೆಯದು; ಮಾಡಲೆಂದು = ಮಾಡುವ ಉದ್ದೇಶದಿಂದ; ಲಿಂಗವೇದಿಯಾಗಿ = ಲಿಂಗಜ್ಞಾನವೆಂಬ ಅಮೃತರಸವ ಸೇವಿಸಿ; ಲಿಂಗಾರ್ಚನೆಯ = ಪ್ರಾಣಲಿಂಗಾರ್ಚನೆಯ; ಶರಣ = ಶರಣಸ್ಥಲಿಯು;
Written by: Sri Siddeswara Swamiji, Vijayapura