Index   ವಚನ - 141    Search  
 
ವಚನರಚನೆಯ ಬಲ್ಲ ಅರುಹಿರಿಯರೆಲ್ಲರು ಮೂರುಳ್ಳವನ ಬಾಗಿಲ ಕಾಯಿದೈಧಾರೆ. ಹೇಳಿ ಕೇಳಿ ಬಲ್ಲತನವಾದೆಹೆನೆಂಬವರೆಲ್ಲರು ಬಾಗಿಲಲ್ಲಿಯೆ ಸಿಕ್ಕಿದರು. ಸ್ಥಾವರಾದಿಗಳು ಮೊದಲಾಗಿ ಇದಿರಿಟ್ಟ ಕುರುಹೆಲ್ಲವು ತಾವಿದ್ದ ಠಾವಿಗೆ ತಂದುಕೊಂಬವರಿಂದ ಕಡೆಯೆ ಅರಿವುಳ್ಳ ಜ್ಞಾನಿಗಳೆಂಬವರು? ಇದು ಕಾರಣ, ಸಂಚಿತ ಅಗಾಮಿ ಪ್ರಾರಬ್ಧ ಎಲ್ಲಿದ್ದಡೂ ತಪ್ಪದು. ಹಲುಬಿ ಹರಿದಾಡಬೇಡ, ಸದಾಶಿವಮೂರ್ತಿಲಿಂಗವ ಒಲವರವಿಲ್ಲದೆ ನೆರೆ ನಂಬು.