Index   ವಚನ - 150    Search  
 
ಪೃಥ್ವಿಯ ಅಪ್ಪುವಿನ ಆಧಾರದಿಂದ ಬೀಜವೊಡೆದು ಬೆಳೆವಂತೆ, ಅರಿದು ಅರಿಹಿಸಿಕೊಂಬ ಉಭಯದ ಮಧ್ಯದಲ್ಲಿ ಜ್ಞಾನಶಕ್ತಿ ಕುರುಹಾಗಿ ಚಿದ್ಘನವಸ್ತು ಪತಿಯಾಗಿ. ಉಭಯದಿಂದ ಕೂಡಿ ಮೇಲನರಿತಲ್ಲಿ ಸದಾಶಿವಮೂರ್ತಿಲಿಂಗ ಬಚ್ಚಬಯಲು.