ತಾವರೆಯ ನಾಳದ ತೆರಪಿನಲ್ಲಿ,
ಮೂರು ಲೋಕವನೊಳಕೊಂಡ ಗಾತ್ರದಾನೆ ಎಡತಾಕುತ್ತದೆ.
ನಾಳ ಹರಿಯದು ಆನೆಯಂಗಕ್ಕೆ ನೋವಿಲ್ಲ.
ಇದೇನು ಚೋದ್ಯವೆಂದು ಕೇಳುವ ಬನ್ನಿ,
ಸದಾಶಿವಮೂರ್ತಿಲಿಂಗವ.
Art
Manuscript
Music
Courtesy:
Transliteration
Tāvareya nāḷada terapinalli,
mūru lōkavanoḷakoṇḍa gātradāne eḍatākuttade.
Nāḷa hariyadu āneyaṅgakke nōvilla.
Idēnu cōdyavendu kēḷuva banni,
sadāśivamūrtiliṅgava.