Index   ವಚನ - 171    Search  
 
ಅರಿವಾಗ ಆ ತನುವಿನಲ್ಲಿದ್ದೆ ಅರಿಯಿತ್ತು, ಮರೆವಾಗ ಆ ತನುವಿನಲ್ಲಿದ್ದೆ ಮರೆಯಿತ್ತು. ಅರಿವು ಮರವೆ ಎರಡಾಯಿತ್ತು, ಉಭಯವ ತಾಳಿದ ಘಟವೊಂದಾಯಿತ್ತು, ಇಂತೀ ಭೇದ. ವಿಷಬೇರಿನಂತೆ ಸಂಚಾರಕ್ಕೆ ಒಳಗಾದುದು ವಿಷಮಯವಾಯಿತ್ತು. ಗೌಪ್ಯಕೊಳಗಾದುದು ಅಮೃತಮಯವಾಯಿತ್ತು. ಇಂತೀ ಸಂಚಾರವುಳ್ಳನ್ನಕ್ಕ ಸಂಚಿತ ಕರ್ಮ, ಸಂಚಾರ ನಿಲೆ ಆತ್ಮ ನಿರ್ಮುಕ್ತವಾದಲ್ಲಿಯೆ ಸದಾಶಿವಮೂರ್ತಿಲಿಂಗವು ತಾನೆ.