Index   ವಚನ - 182    Search  
 
ಶೈವವಾದ, ತತ್ತ್ವವಾದ, ಮಾಯಾವಾದ ಇಂತೀ ವಾದಂಗಳಲ್ಲಿ ಹೋರುವಾಗ ವೇದ ಹೇಳುತ್ತದೆ : ಓಂ ಎಂಬಲ್ಲಿ ಎರಡಳಿದು ಒಂದೇ ಉಳಿಯಿತ್ತು. ಕೆಲವಸ್ತು ದೇವಂಗೆ ಸರಿಯೆಂದಡೆ ಅದು ನಿಮ್ಮ ಒಲುಮೆಯ ಒಲವರವೈಸಲ್ಲದೆ ಬಲುಹೀನ ಮಾತು ಬೇಡ. ಕಾಲಾಂತಕನ ಕರದಲ್ಲಿ ಕಪಾಲವದೆ, ಪಾದಯುಗಳದಲ್ಲಿ ಅಕ್ಷಿಯದೆ. ಮಿಕ್ಕಾದ ಅರಿಕುಲ ದೈವಂಗಳ ಶಿರಮಾಲೆಯಲ್ಲಿ ಸಿಕ್ಕಿ ಅದೆ. ಮತ್ತಿನ್ನು ಒರಲಲೇಕೆ? ಸದಾಶಿವಮೂರ್ತಿಲಿಂಗವಲ್ಲದಿಲ್ಲಾ ಎಂದೆ.