ಹೊರಗನೆ ಕೊಯ್ದು ಹೊರಗನೆ ಪೂಜಿಸಿದವರ ಕಂಡು,
ನಾಚಿದೆ ನಾಚಿದೆನಯ್ಯಾ.
ಒಳಗೆ, ಒಂದು ಅನಿಮಿಷಲಿಂಗವ ಕಂಡು,
ಎನ್ನ ಮನೋಪುಷ್ಪದಲ್ಲಿ ಪೂಜಿಸಿದಡೆ
ನಾಚಿಕೆ ಮಾದು ನಿಸ್ಸಂದೇಹಿಯಾದೆನು ಗುಹೇಶ್ವರಾ.
Transliteration Horagane koydu horagane pūjisidavara kaṇḍu,
nācide nācidenayyā.
Oḷage, ondu animiṣaliṅgava kaṇḍu,
enna manōpuṣpadalli pūjisidaḍe
nācike mādu nis'sandēhiyādenu guhēśvarā.
Hindi Translation बाहर ही तोडकर बाहर ही पूजनेवालों को देख लज्जा हुई।
अंदर एक अनिमिष लिंग देख
मेरे मनो पुष्प से पूजा करें तो
लज्जा छोड निःसंदेही हुआ गुहेश्वरा।
Translated by: Eswara Sharma M and Govindarao B N
Tamil Translation புறத்திலே கொய்து, புறத்திலே பூஜிப்பவரைக்
கண்டு வருந்தினேன் ஐயனே
அகத்திலே ஞானலிங்கத்தைக் கண்டு
(என்) மனமெனும் மலரால் பூஜித்தால்
வருத்தமகன்று, ஐயமற்றவனானேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನಿಮಿಷ ಲಿಂಗವ = ನಿತ್ಯಬೋಧ ರೂಪ ಪ್ರಾಣಲಿಂಗವ; ಒಳಗೆ = ತನ್ನ ಹೃದಯಾಂತರಾಳದಲ್ಲಿ(ನೆಲೆಸಿದ) ; ಕಂಡು = ನೋಡಿ; ಕಂಡು = ಪರಿಭಾವಿಸಿ; ನಾಚಿಕೆ ಮಾದು = ಭಿನ್ನಭ್ರಮೆ ಅಳಿದು; ನಾಚಿದೆನು = ಬೇಸರಿಸಿದೆನು; ನಿಃಸಂದೇಹಿಯಾದೆನು = ನನ್ನಲ್ಲಿ ನಾನು ನೆಲೆಸಿ ನಿಶ್ಚಿಂತನಾದೆನು, ಪ್ರಾಣಲಿಂಗದೊಡನೆ ಬೆರೆತು ನಿರ್ಬಯಲುಗೊಂಡೆನು; ಪೂಜೆಯ ಮಾಡಿದಡೆ = ಆ ಲಿಂಗವೇ ತಾನೆಂದು ಅನುಸಂಧಾನಗೈದರೆ; ಮನೋಪುಷ್ಪದಲ್ಲಿ = ಪರಿಶುದ್ದವಾದ ಮನವೆಂಬ ಪುಷ್ಪವನ್ನು ಅರ್ಪಿಸಿ; ಹೊರಗನೆ ಕೊಯ್ದು = ಹೊರಗಿನ ಪುಷ್ಪಗಳನೆತ್ತಿ; ಹೊರಗನೆ ಪೂಜಿಸಿದವರ = ಹೊರಗಿನ ಲಿಂಗವನು ಅರ್ಚಿಸಿದವರ;
Written by: Sri Siddeswara Swamiji, Vijayapura