ಮಹದಾಕಾಶದ ಮನೆಯಲ್ಲಿ ಪಂಚಕಾಲಿನ ನೆಲಹು ಕಟ್ಟಿರಲಾಗಿ,
ಅದಕ್ಕೆ, ಜಲತ್ಕಾರನೆಂಬ ಗಡಿಗೆ ಇದ್ದಿತ್ತು.
ಅದರೊಳಗೆ ಮಧುರ ಮಾಂದಿರ ವಿಮಲ ಜಲತುಂಬಿ.
ಒಂದಕ್ಕೊಂದು ಹೊದ್ದದೆ ಕುಂಭವೊಂದರಲ್ಲಿ
ನಿಂದ ಭೇದವ ನೋಡಾ.
ಆ ಗಡಿಗೆಯ ತೆಗೆವುದಕ್ಕೆ ಮಹದಾಕಾಶವನೇರುವುದಕ್ಕೆ ನೆಲೆಯಿಲ್ಲ.
ನೆಲಹಿಂಗೆ ಮೊದಲಿಲ್ಲ, ಕುಂಭಕ್ಕಂಗವಿಲ್ಲ,
ಒಳಗಳ ಭೇದವ ವಿವರಿಸಬಾರದು.
ಇಂತೀ ಘಟಮಠ ಆಧಾರದಲ್ಲಿ ಪರಿಪೂರ್ಣನಾದೆಯಲ್ಲಾ,
ಸದಾಶಿವಮೂರ್ತಿಲಿಂಗವೆ ಅವಿರಳನಾಗಿ.
Art
Manuscript
Music
Courtesy:
Transliteration
Mahadākāśada maneyalli pan̄cakālina nelahu kaṭṭiralāgi,
adakke, jalatkāranemba gaḍige iddittu.
Adaroḷage madhura māndira vimala jalatumbi.
Ondakkondu hoddade kumbhavondaralli
ninda bhēdava nōḍā.
Ā gaḍigeya tegevudakke mahadākāśavanēruvudakke neleyilla.
Nelahiṅge modalilla, kumbhakkaṅgavilla,
oḷagaḷa bhēdava vivarisabāradu.
Intī ghaṭamaṭha ādhāradalli paripūrṇanādeyallā,
sadāśivamūrtiliṅgave aviraḷanāgi.