Index   ವಚನ - 196    Search  
 
ಹುಲ್ಲು ಕೆಂಡವ ಮುಟ್ಟಿ ಹೊತ್ತದ ಪರಿಯ ನೋಡಾ, ಹಸಿದ ಸರ್ಪನ ಹೆಡೆಯ ನೆಳಲಲ್ಲಿ ಮಂಡೂಕ ನಿಂದ ತೆರನ ನೋಡಾ. ಜೀವ ಪರಮನಲ್ಲಿ ಬಂದುನಿಂದು ಒಂದಾಗದ ಸಂದೇಹವ ನೋಡಾ. ಇಂತೀ ಸಂದನರಿದಲ್ಲದೆ ಅಂಗ-ಲಿಂಗ ಪ್ರಾಣ- ಪರಮವೊಂದಾಗಲಿಲ್ಲ, ಸದಾಶಿವಮೂರ್ತಿಲಿಂಗವನರಿವುದಕ್ಕೆ.