ಆತ್ಮಗುಣ ವಿವರದ ಪರಿಯೆಂತುಟೆಂದಡೆ:
ತರುವಿನ ಪರಿಭೇದದಂತೆ,
ಮರ ಬಲಿದು ಋತುಕಾಲಕ್ಕೆ ಪಲ್ಲವದ ಮಧ್ಯದಲ್ಲಿ,
ಹೂ ಮಿಡಿ ಬಲಿದು ರಸನಿಂದು ಫಳವಾದಂತೆ
ಆತ್ಮನ ವಿವೇಕ ಸ್ವಸ್ಥದಲ್ಲಿ ನಿಂದು ತನ್ನಿರವ ತಾ ವಿಚಾರಿಸಿ,
ಮಹವನೊಡಗೂಡಿ, ಮಲತ್ರಯ ದೂರವಾಗಿ,
ಚಿಚ್ಛಕ್ತಿಯ ಹೃದಯದಲ್ಲಿ ಚಿದ್ಘನ ಬಲಿದು ಸ್ವರೂಪವಾಗಿ ನಿಂದು,
ಆತ್ಮನ ಅಳಿವನರಿದು ಅಧ್ಯಾತ್ಮಯೋಗಸಂಬಂಧ,
ಸದಾಶಿವಮೂರ್ತಿಲಿಂಗವನರಿದುದು.
Art
Manuscript
Music
Courtesy:
Transliteration
Ātmaguṇa vivarada pariyentuṭendaḍe:
Taruvina paribhēdadante,
mara balidu r̥tukālakke pallavada madhyadalli,
hū miḍi balidu rasanindu phaḷavādante
ātmana vivēka svasthadalli nindu tannirava tā vicārisi,
mahavanoḍagūḍi, malatraya dūravāgi,
cicchaktiya hr̥dayadalli cidghana balidu svarūpavāgi nindu,
ātmana aḷivanaridu adhyātmayōgasambandha,
sadāśivamūrtiliṅgavanaridudu.