ಶರೀರದಲ್ಲಿ ಷಡಾಧಾರಚಕ್ರವುಂಟೆಂಬರು.
ಆಧಾರವೊಂದರಿಂದ ಆದುದನರಿಯದೆ
ಆರುಂಟೆಂದು ಬೇರೆ ಕಲ್ಪಿಸಬಹುದೆ?
ಅದಕ್ಕೆ ದೃಷ್ಟ:
ಹುತ್ತದ ಬಾಯಿ ಹಲವಾದಡೆ ಒಡಲೊಂದೆ ಘಟಭೇದ.
ಆಧಾರ ನಾನೆಂಬುದನರಿತಲ್ಲಿ ಷಡಾಧಾರ ನಿಂದಿತ್ತು.
ಅದು ತನ್ನಯ ಚಿತ್ತದ ಭೇದವಲ್ಲದೆ ವಸ್ತುವನರಿವ ಭೇದವಲ್ಲ.
ಹಲವು ಓಹರಿಯಲ್ಲಿ ತಿಳಿದು ನೋಡುವ ಒಬ್ಬನೆ ಮನೆಯೊಡೆಯ.
ಆ ಹೊಲಬನರಿತಲ್ಲಿಯೆ ನಿಂದುದು,
ಸದಾಶಿವಮೂರ್ತಿಲಿಂಗದ ಅಂಗ.