ಗಗನದ ಮೇಲೊಂದು ಸರೋವರ,
ಆ ಜಲದಲ್ಲಿ ಮುಖವ ತೊಳೆದು
ಹೂವ ಕೊಯ್ವವರೆಲ್ಲರೂ,
ದೇವರಿಗೆ ಮುಖಮಜ್ಜನವನೆರೆದು,
ಪೂಜಿಸಿ ಹೊಡವಂಟಡೆ
ಒಮ್ಮೆ ನಾಯಕನರಕ ತಪ್ಪದಲ್ಲಾ!
ದೇವಲೋಕದ ಪ್ರಮಥರ
ಲಜ್ಜೆಯನೇನ ಹೇಳುವೆ ಗುಹೇಶ್ವರಾ.
Transliteration Gaganada mēlondu sarōvara,
ā jaladalli mukhava toḷedu
hūva koyvavarellarū,
dēvarige mukhamajjanavaneredu,
pūjisi hoḍavaṇṭaḍe
om'me nāyakanaraka tappadallā!
Dēvalōkada pramathara
lajjeyanēna hēḷuve guhēśvarā.
Hindi Translation गगन पर एक सरोवर।
उस जल में मुँह धोकर फूल चुनते हैं
देव को मुँह मज्जन कर ,
पूजा कर साष्टांगकर चले तो निश्चित नायक नरक है!
देवलोक के प्रमथों की
लज्जा को क्या कहूँ गुहेश्वरा।
Translated by: Eswara Sharma M and Govindarao B N
Tamil Translation ஆகாயத்தின் மீது ஒரு குளம், அந்த நீரில்
முகத்தைத் தூய்மை செய்து, மலரைக் கொய்யுமனைவரும்
இறைவனுக்குத் தூய நீரினால் திருமஞ்சனம் செய்து
பூஜித்து நெடுஞ்சாண் கிடையாக வீழின், கீழான
நரகம் தவறாது, மேலுலகிலே கணமாக வேண்டுமெனும்
ஒவ்வாத விருப்பத்தை என்னென்பேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆ ಜಲದಲ್ಲಿ = ಆ ಶುದ್ದವಾದ ಹಿಮಜಲದಲ್ಲಿ; ಎಲ್ಲರೂ = ಸಕಾಮಭಾವವದ ಭಕ್ರು, ಕಠೋರ ವ್ರತಿಗಳು; ಏನ ಹೇಳುವೆ = ಏನೆಂದು ಹೀಗಳೆವುದು?; ಒಮ್ಮೆ = ಖಂಡಿತವಾಗಿಯೂ; ಗಗನ = ಮುಗಿಲೆತ್ತರದ ಹಿಮಗರಿ; ತಪ್ಪದು = ಬಿಡದು; ದೇವರಿಗೆ = ಪ್ರತಿಷ್ಠಾಪಿತ ಲಿಂಗಕ್ಕೆ; ದೇವಲೋಕದ ಪ್ರಮಥರ = ದೇವಲೋಕದಲ್ಲಿ ಪ್ರಮಥರಾಗಬಯಸುವ ಸಕಾಮ ಭಕ್ತರ; ನಾಯಕನರಕ = ಭವಬಂಧನ; ಪೂಜಿಸಿ = ಪುಷ್ಪಗಳನೇರಿಸಿ; ಮುಖಮಜ್ಜನವೆಂಬುದನೆರೆ = ಶುದ್ದೋದಕದಿಂದ ಅಭಿಷೇಕವನು ಮಾಡಿ; ಮೊಗವ ತೊಳೆದು = ಮುಖಮಾರ್ಜನ-ಸ್ನಾನಾದಿಗಳಗೈದು; ಲಜ್ಜೆಯ = ಸಲ್ಲದ ವರ್ತನೆಯ; ಸರೋವರ = ಅಲ್ಲೊಂದು ಅತ್ಯಂತ ಶುದ್ದ ಜಲದ ಸರೋವರ; ಹೂವ ಕೊಯ್ವರು = ಪುಷ್ಪಗಳನ್ನೆತ್ತುವರು; ಹೊಡವಂಟಡೆ = ಸಾಷ್ಟಾಂಗಗೈದರೆ;
Written by: Sri Siddeswara Swamiji, Vijayapura