ಆಗಮಂಗಳ ಶೋಧಿಸಿ ಮಾತಿನ
ನೀತಿಯ ಹೇಳುವರೆಲ್ಲರು ಹಿರಿಯರೆ?
ಖ್ಯಾತಿಯ ಘಟಧರ್ಮಕ್ಕೆ ಮಾಡುವರೆಲ್ಲರು ಭಕ್ತರೆ?
ವೇಷವ ಬಿಟ್ಟು ಮೈವಾಸನವನೊಲ್ಲದೆ
ವೇಷದಲ್ಲಿ ತಿರುಗುವ ವಿರಕ್ತರೆಂದು ಮತ್ತೆ,
ಭವಪಾಶದಲ್ಲಿ ಬೀಳುತ್ತಿಹ ಪಾಷಂಡಿಗಳಿಗೇಕೆ ಸತ್ಪಥನೀತಿ?
ಇಂತೀ ತ್ರಿವಿಧವ ನೇತಿಗಳೆದಲ್ಲದೆ
ಸದಾಶಿವಮೂರ್ತಿಲಿಂಗವನರಿಯಬಾರದು.
Art
Manuscript
Music
Courtesy:
Transliteration
Āgamaṅgaḷa śōdhisi mātina
nītiya hēḷuvarellaru hiriyare?
Khyātiya ghaṭadharmakke māḍuvarellaru bhaktare?
Vēṣava biṭṭu maivāsanavanollade
vēṣadalli tiruguva viraktarendu matte,
bhavapāśadalli bīḷuttiha pāṣaṇḍigaḷigēke satpathanīti?
Intī trividhava nētigaḷedallade
sadāśivamūrtiliṅgavanariyabāradu.