Index   ವಚನ - 251    Search  
 
ಶರೀರ ದಹನ ಮುಖವೆಲ್ಲವು ರುದ್ರತತ್ವ ಆಧೀನವಾಗಿಹುದು. ಶರೀರಮುಖ ಸಮಾಧಿ ಆಧೀನವಾಗಿಹುದೆಲ್ಲವು ವಿಷ್ಣುಪಕ್ಷವಾಗಿಹವು. ಇಂತೀ ಉಭಯ ಲಯವನರಿತಲ್ಲಿ ಪೂರ್ವಕಕ್ಷೆಯಾಗಿಹುದು. ಇಂತೀ ಉಭಯವ ಮರೆಯಲ್ಲಿ ಉತ್ತರಕಕ್ಷೆಯಾಗಿಹುದು. ಇಂತೀ ಭೇದಂಗಳನರಿತು ಹೊರಗಾಗಿ ನಿಂದಲ್ಲಿ ಸದಾಶಿವಮೂರ್ತಿಲಿಂಗದ ಅರಿವು ಒಳಗಾಗಿಹುದು.