ಜಗದ ವರ್ತಕದ ಇರವು ಎಂತೆಂದಡೆ:
ಶೈವ ನೇಮಸ್ಥ ಎರಡೆ ಭೇದ.
ದಿವಾರಾತ್ರಿ ಉಭಯ ಕೂಡಿ ದಿನ ಲೆಕ್ಕಕ್ಕೆ ಬಂದಂತೆ,
ಶಕ್ತಿ ಸಾಕಾರವಾಗಿ, ನಿಶ್ಶಕ್ತಿ ವಸ್ತುರೂಪಾಗಿ,
ಉಭಯವು ಕೂಡಿ ಘಟ ನಡೆವಂತೆ ನಡೆವುದು ಜಗ ಸಂಬಂಧ,
ಉಭಯಕ್ಕೆ ಹೊರಗಾದುದು,
ಸದಾಶಿವಮೂರ್ತಿಲಿಂಗದ ಭಾವಸಂಬಂಧ.
Art
Manuscript
Music
Courtesy:
Transliteration
Jagada vartakada iravu entendaḍe:
Śaiva nēmastha eraḍe bhēda.
Divārātri ubhaya kūḍi dina lekkakke bandante,
śakti sākāravāgi, niśśakti vasturūpāgi,
ubhayavu kūḍi ghaṭa naḍevante naḍevudu jaga sambandha,
ubhayakke horagādudu,
sadāśivamūrtiliṅgada bhāvasambandha.