ವಿಷ್ಣು ದೈವವೆಂದಡೆ ಪಾಂಡವರ ಬಂಡಿಯ ಬೋವನಾದ,
ಬ್ರಹ್ಮದೈವವೆಂದಡೆ ಆ ಬೋವಂಗೆ ಕಂದನಾದ,
ಜಿನ ದೈವವೆಂದಡೆ ಆ ಬೋವನ ಅವತಾರವಾದ,
ಮುಪ್ಪುರವ ಕೆಡಿಸುವಲ್ಲಿ ಕುಟ್ಟಿಲ ಭೌದ್ಧನಾದ,
ರುದ್ರ ದೈವವೆಂದಡೆ ಅರ್ಧನಾರಿಗೆ ಸಿಕ್ಕಿದ.
ಇಂತೀ ಸಮಯ ಕುಲಕ್ಕೆ ಹೊರಗಾಗಿ,
ಶಕ್ತಿ ಸಮಯ ನಿರಸನವಾಗಿ ನಿಂದುದು
ಸದಾಶಿವಮೂರ್ತಿಲಿಂಗವೊಂದಲ್ಲದಿಲ್ಲಾ ಎಂದೆ.
Art
Manuscript
Music
Courtesy:
Transliteration
Viṣṇu daivavendaḍe pāṇḍavara baṇḍiya bōvanāda,
brahmadaivavendaḍe ā bōvaṅge kandanāda,
jina daivavendaḍe ā bōvana avatāravāda,
muppurava keḍisuvalli kuṭṭila bhaud'dhanāda,
rudra daivavendaḍe ardhanārige sikkida.
Intī samaya kulakke horagāgi,
śakti samaya nirasanavāgi nindudu
sadāśivamūrtiliṅgavondalladillā ende.