Index   ವಚನ - 260    Search  
 
ಸೀತೆ ಸೆರೆಹೋಹಾಗ, ವಾಣಿಯ ನಾಸಿಕ ಅರಿವಾಗ, ಉಮಾದೇವಿಯ ಅಸುರನರಸುವಾಗ, ಉತ್ಪತ್ಯದಾತ, ಸ್ಥಿತಿಗೆ ಕರ್ತ, ಲಯಕ್ಕೊಡೆಯ ಎಲ್ಲಿ ಹೋದ[ರೆಂ]ದರಿ[ಯೆ]. ಇಂತಿವ ಬಲ್ಲವ ಕಲ್ಲಿಗೆ ಹೊರಗಾದ ಸದಾಶಿವಮೂರ್ತಿಲಿಂಗವಲ್ಲದಿಲ್ಲ.