ವೇದವನೋದಿದಲ್ಲಿ ಪ್ರಣವವನರಿಯಬೇಕು.
ಶಾಸ್ತ್ರವ ಹೇಳಿದಲ್ಲಿ ಸಂಚಿತ ಕರ್ಮವನರಿಯಬೇಕು.
ಪುರಾಣವನೋದಿದಲ್ಲಿ ಪುಣ್ಯತಮಭೇದಂಗಳಲ್ಲಿ
ಸನ್ನದ್ಧವ ತಿಳಿಯಬೇಕು.
ಪನ್ನಗಫಲದಂತಾಗದೆ ಉಭಯಶುದ್ಧವಾಗಿರಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Vēdavanōdidalli praṇavavanariyabēku.
Śāstrava hēḷidalli san̄cita karmavanariyabēku.
Purāṇavanōdidalli puṇyatamabhēdaṅgaḷalli
sannad'dhava tiḷiyabēku.
Pannagaphaladantāgade ubhayaśud'dhavāgirabēku,
sadāśivamūrtiliṅgavanarivudakke.