Index   ವಚನ - 303    Search  
 
ಅನಾದಿಯಿಂದತ್ತಲಾದ ಅಂತರಾದಿಮಧ್ಯದಲ್ಲಿ, ನಿಜಸ್ವರೂಪ ನಿಃಕಲ[ವಸ್ತು ಜಗಲೀ]ಲಾಭಾವಿಯಾಗಿ ತ್ರಿಗುಣಾತ್ಮಕವಾದ ಭೇದಪೂರ್ವಕ ಮುಂತಾದ ಷಡ್ದರ್ಶನದಲ್ಲಿ ವಿವರಂಗಳಿಗೆ, ಶೈವ ವೈಷ್ಣವ ಉಭಯಂಗಳಲ್ಲಿ ಶೈ[ವರಾರು], ವೈಷ್ಣವರಾರು, ಇಂತೀ ಉಭಯರಲ್ಲಿ ಅಡಗುವ ಗುಣ ವಿವರ: ಶೈವಕ್ಕೆ ಮೂರು, ವೈಷ್ಣವಕ್ಕೆ ಮೂರು, ಉಭಯನಾಮ ಕುಲಲಯ[ವಹಲ್ಲಿ] ಶೈವಕ್ಕೆ ದಹನ, ವೈಷ್ಣವಕ್ಕೆ ಸಮಾಧಿ, ಶರೀರದಹನ ಮುಖವೆಲ್ಲವೂ ರುದ್ರತತ್ವಾಧೀನವಾಗಿಹುದು. ಶರೀರ ಮುಖ ಸಮಾ(ಧಿ ಆಧೀನ)ವಾಗಿಹುದೆಲ್ಲವೂ ವಿಷ್ಣುಪಕ್ಷವಾಗಿಹುದು. ಇಂತೀ ಉಭಯಲಯವನರಿತಲ್ಲಿ ಪೂರ್ವಕಕ್ಷೆಯಾಗಿಹುದು. ಇಂತೀ ಉಭಯವ ಮರೆತಲ್ಲಿ ಉತ್ತ[ರಕಕ್ಷೆಯಾಗಿ]ಹುದು. ಇಂತೀ ಭೇದಂಗಳರಿತು ಹೊರಗಾಗಿ ನಿಂದಲ್ಲಿ, ಸದಾಶಿವಮೂರ್ತಿಲಿಂಗದರಿವು ಒಳಗಾಯಿತ್ತಾಗಿಹುದು.