•  
  •  
  •  
  •  
Index   ವಚನ - 435    Search  
 
ಹಿಂದಣ ನಾಕವನೂ, ಮುಂದಣ ಅನಂತವನೂ ಒಂದೇ ದಿನ ಒಳಕೊಂಡಿತ್ತು ನೋಡಾ! ಆ ಒಂದು ದಿನವನೊಳಕೊಂಡು ಮಾತಾಡುವ ಮಹಂತನ ಕಂಡು ಬಲ್ಲವರಾರಯ್ಯ? ಆದ್ಯರು ವೇದ್ಯರು ಅನಂತ ಹಿರಿಯರು, ಲಿಂಗದಂತುವನರಿಯದೆ ಅಂತೆ ಹೋದರು ಕಾಣಾ ಗುಹೇಶ್ವರಾ!
Transliteration Hindaṇa nākavanū, mundaṇa anantavanū ondē dina oḷakoṇḍittu nōḍā! Ā ondu dinavanoḷakoṇḍu mātāḍuva mahantana kaṇḍu ballavarārayya? Ādyaru vēdyaru ananta hiriyaru, liṅgadantuvanariyade ante hōdaru kāṇā guhēśvarā!
Hindi Translation पीछे के अनंत आगे के अनंत एक दिन मिले थे देखो। एक दिन मिलकर बातें करनेवाले महंत को देख जानते कौन? आद्या, वेद्या अनंत बुजुर्ग लिंग निज स्वरूप को बिना जाने चले, देखो गुहेश्वरा। Translated by: Eswara Sharma M and Govindarao B N
Tamil Translation கடந்த கணக்கிலா ஆண்டுகளையும், வரவுள்ள கணக்கிலா ஆண்டுகளையும் ஒரு நாள் தன்னிலடக்கிக் கொண்டது காணாய் சிவானுபவம் பெற்று வாழும் பெருமையுடையவனை அகத்திலே அவன் பெற்ற அனுபவத்தை உணர்பவர் உளரோ? பகட்டு பக்தரும், ஞானியரும், எண்ணற்ற பெரியோரும் இலிங்கத்தை உணராமலே சென்றனர். காணாய் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂತೆ ಹೋದರು = ಅನುಭಾವಿಗಳಾಗದೆ, ಲಿಂಗಾನಂದದ ಸುಖವನು ಸವಿಯದೆ ಹಾಗೆಯೇ ಹೋದರು.; ಅನಂತ ಹಿರಿಯರು = ತಾವು ಹಿರಿಯರೆಂದು ಭಾವಿಸಿಕೊಂಡವರು, ಹಿರಿತನದ ಸ್ಥಾನದಲಿ ಮಂಡಿಸಿದವರು-ಹಲವರು; ಅರಿಯದೆ = ಅನುಭವತಹ ಅರಿಯದೆ; ಆದ್ಯರು = ಪೂರ್ವಕಾಲದಲ್ಲಿ ಆಗಿಹೋದ ಶಿವಭಕ್ತರು; ಒಂದು ದಿನ = ಶಿವಜ್ಞಾನೋದಯವಾದ ಒಂದು ಕ್ಷಣ; ಒಂದು ದಿನವನೊಳಕೊಂಡು = ಲಿಂಗಸಮರತಿಯ ಅನುಭವ ಪಡೆದು; ಒಳಕೊಂಡಿತ್ತು = ತನ್ನಲ್ಲಿ ಅಡಗಿಸಿ ಕೊಂಡಿತ್ತು; ಕಂಡು ಬಲ್ಲವರಾರಯ್ಯ? = ಗುರುತಿಸುವವರು ಯಾರಿದ್ದಾರೆ?; ಮಹಂತನ = ಮಹಾನುಭಾವಿಯಾದ ಶರಣನ; ಮಾತಾಡುವ = ಬಾಳುವ; ಮುಂದಣ ಅನಂತವನು = ಈ ಮುಂದೆ ಬರಲಿರುವ ಅಸಂಖ್ಯ ವರುಷಗಳನು; ಲಿಂಗದಂತುವನು = ಲಿಂಗದ ನಿಜಸ್ವರೂಪವನು; ವೇದ್ಯರು = ಶಾಬ್ದಿಕವಾಗಿ ಅಂಗ-ಲಿಂಗದ ಜ್ಞಾನವನು ಪಡೆದವರು; ಹಿಂದಣ ಅನಂತವನು = ಈ ಹಿಂದೆ ಆಗಿಹೋದ ಅಸಂಖ್ಯ ವರುಷಗಳನು; Written by: Sri Siddeswara Swamiji, Vijayapura