•  
  •  
  •  
  •  
Index   ವಚನ - 437    Search  
 
ಆದಿಯಾಧಾರವುಳ್ಳನ್ನಕ್ಕರ ಉಪಚಾರ, ಎರಡೂ ಒಂದಾದಡೆ ಶಿವಾಚಾರ. ಆ ಶಿವಾಚಾರ ಸಯವಾದಡೆ ಬ್ರಹ್ಮಾಚಾರ, ಗುಹೇಶ್ವರನನರಿದಡೆ ಅನಾಚಾರ!
Transliteration Ādiyādhāravuḷḷannakkara upacāra, eraḍū ondādaḍe śivācāra. Ā śivācāra sayavādaḍe brahmācāra, guhēśvarananaridaḍe anācāra!
Hindi Translation आदि आधार रहने तक उपचार , दोनों एक हो तो शिवाचार , वह शिवाचार पक्का हो तो ब्रह्माचार, गुहेश्वर को जानेतो आचार निष्पत्ति है। Translated by: Eswara Sharma M and Govindarao B N
Tamil Translation ஆதி ஆதாரம் உள்ளவரையில் பூஜையுபசாரம் இரண்டும் ஒன்றாயின் சிவாசாரம் சிவாசாரம் பரிபக்குவமாயின் பிரம்மாசாரம் குஹேசுவரனை உணரின் ஆசாரம் இல்லையன்றோ! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನಾಚಾರ = ಆಚಾರನಿಷ್ಪತ್ತಿಯು; ಅರಿದಡೆ = ಅನುಭಾವಿಯಾಗಿ ನಿಂದರೆ; ಆ ಶಿವಾಚಾರ = ಆ ಅದ್ವಯಾನುಸಂಧಾನ ರೂಪ ಶಿವಾಚಾರವು; ಆದಿ = ಎಲ್ಲ ತತ್ವ್ತಗಳ ಮೂಲನಾದ ಶಿವ; ಆಧಾರ = ಅವನ ಆಧಾರದಲ್ಲಿ ಕಾಣಬರುವ ಜೀವ; ಉಪಚಾರ = ಪೂಜೋಪಚಾರ; ಉಳ್ಳನ್ನಕ್ಕರ = ಈ ಭೇದಭಾವವಿರುವವರೆಗೆ; ಎರಡೂ = ಶಿವ ಮತ್ತು ಜೀವ-ಎಂಬೆರಡೂ; ಒಂದಾದಡೆ = ಒಂದು ಎಂಬ ಭಾವ ಮೂಡಿದರೆ; ಬ್ರಹ್ಮಾಚಾರ = ಅದುವೆ ಬ್ರಹ್ಮಾಚಾರವು; ಶಿವಾಚಾರ = ಆಗ ನಡೆದ ಅನುಸಂಧಾನವು; ಸಯವಾದಡೆ = ಪಕ್ವವಾದರೆ, ಗಟ್ಟಿಗೊಂಡರೆ; Written by: Sri Siddeswara Swamiji, Vijayapura