•  
  •  
  •  
  •  
Index   ವಚನ - 438    Search  
 
ಕಿಚ್ಚಿನೊಡನೆ ಹೋರಿದ ಹುಳ್ಳಿಯಂತಾದೆನಯ್ಯಾ. ಬೆಂದ ನುಲಿಯ ಸಂದಿಕ್ಕಿ ಮತ್ತೊಂದ ಮಾಡಬಾರದಯ್ಯಾ. ಗುಹೇಶ್ವರಾ ನಿಮ್ಮ ನಿಲವಿನ ಪರಿ ಇಂತುಟಯ್ಯಾ.
Transliteration Kiccinoḍane hōrida huḷḷiyantādenayyā. Benda nuliya sandikki mattonda māḍabāradayyā. Guhēśvarā nim'ma nilavina pari intuṭayyā.
Hindi Translation अग्नि में भूने कुलथी जैसे हुआ पकारस्सी रोडने के बादऔर एक को नहीं करना है। गुवेश्वरा, तुम्हारी स्थिति ऎसी है। Translated by: Eswara Sharma M and Govindarao B N
Tamil Translation தீயிலே வெந்த தானிய மனைய அறுந்த கயிற்றை இணைத்து வேறு ஒன்று செய்யவியலாது குஹேசுவரனே, உம் சரணனின் அனுபவ உணர்வு இவ்விதமாம் ஐயனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಇಂತುಟಯ್ಯಾ = ಹೀಗಿರುವುದು; ಕಿಚ್ಚಿನೊಳಗೆ = ಬೆಂಕಿಯಲ್ಲಿ; ನಿಮ್ಮ = ನಿಮ್ಮ ಶರಣನ; ನಿಲುವಿನ ಪರಿ = ಅನುಭಾವಿಕ ಸ್ಥಿತಿಯು; ಬೆಂದ ನುಲಿಯ = ಬೆಂದುಹೋದ ಹುರಿಯನ್ನು; ಮತ್ತೊಂದ ಮಾಡಬಾರದಯ್ಯ = ಹೊಸತೊಂದು ಹಗ್ಗವನು ಮಾಡಲಿಕ್ಕಾಗದು; ಸಂದಕ್ಕಿ = ಹೊಂದಿಸಿ ಹೊಸೆದು; ಹುರಿದ = ಹುರಿಯಲಾದ; ಹುಳ್ಳಿಯಂತಾದೆನಯ್ಯಾ = ಹುರಳಿಯಂತೆ ನಾನು ಆದೆನು; Written by: Sri Siddeswara Swamiji, Vijayapura