ಸತ್ತ ಕೋಳಿ ಎದ್ದು ಕೂಗಿತ್ತ ಕಂಡೆ,
ಮೊತ್ತದ ಮಾಮರನುಲಿಯಿತ್ತ ಕಂಡೆ.
ಕತ್ತಲೆ ಬೆಳಗಾಯಿತ್ತ ಕಂಡೆ,
ಹೊತ್ತಾರೆ ಎದ್ದು ಹೊಲಬುದಪ್ಪೂದ ಕಂಡೆ.
ಇದೇನು ಸೋಜಿಗ ಹತ್ತಿತ್ತೆಂದರಿಯೆ ಗುಹೇಶ್ವರಾ.
Transliteration Satta kōḷi eddu kūgitta kaṇḍe,
mottada māmaranuliyitta kaṇḍe.
Kattale beḷagāyitta kaṇḍe,
hottāre eddu holabudappūda kaṇḍe.
Idēnu sōjiga hattittendariye guhēśvarā.
Hindi Translation मरा मुरगा उठकर बाँगते देखा।
राशी मामर प्रफुल्लित हुआ देखा।
अंधेरा प्रकाश हुआ देखा।
तडके उठकर गुमराह हुआ देखा।
यह क्या लगा नहीं जानता गुहेश्वरा।
Translated by: Eswara Sharma M and Govindarao B N
Tamil Translation மடிந்த கோழி எழுந்து கூவியதைக் கண்டேன்
திரண்ட பயன்களுடன் மாமரம் மலர்ந்திருந்ததைக் கண்டேன்
இருள் அகன்றதைக் கண்டேன்
ஞான எழுச்சியுடன் விழிப்புற்று வழி தவறியதைக் கண்டேன்
என்னை எது சூழ்ந்துளது என்பதை அறியேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಇದು ಏನು ಹತ್ತಿತ್ತು = ಇಲ್ಲಿ ನನ್ನನ್ನು ಯಾವುದು ಗಾಢವಾಗಿ ಆವರಿಸಿತು, ತನ್ನ ವಶಗೊಳಿಸಿಕೊಂಡಿತು; ಉಲಿಯಿತ್ತ ಕಂಡೆ = ಆ ಪ್ರಣವನಾದದ ಪರಿಣಾಮವಾಗಿ ಪ್ರಪುಲ್ಲಿತವಾಯಿತು, ವಿಕಸಿತಗೊಂಡಿತು; ಎಂದರಿಯೆ = ಎಂಬುದನು ತಿಳಿಯೆ; ಎದ್ದು = ಪ್ರಜಾಗ್ರತನಾಗಿ; ಎದ್ದು ಕೂಗಿತ್ತ ಕಂಡೆ = ಕೇಳಿಬಂದಿತು; ಕತ್ತಲೆ = ಅಜ್ಞಾನ; ಬೆಳಗಾಯಿತ್ತ ಕಂಡೆ = ಹರಿದುಹೋದುದನ್ನು ನೋಡಿದೆ; ಮಾಮರನು = ಮಾಮರವು, ಅತ್ಯಂತ ನಿರ್ಮಲಗೊಂಡ ಮನಸ್ಸು; ಮೊತ್ತದ = ರಾಶಿಗೊಂಡ, ಶ್ರದ್ದಾದಿ ವಿವಿಧ ಭಕ್ತಿಭಾವಗಳಿಂದ ಫಲಫಲಿಸುವ; ಸತ್ತ ಕೋಳಿ = ಅನಾಹತ ಪ್ರಣವನಾದ; ಹೊತ್ತಾರೆ = ಆ ಶಿವಜ್ಞಾನರವಿಯ ಉದಯದೊಂದಿಗೆಯೇ; ಹೊಲಬುದಪ್ಪಿತ್ತ ಕಂಡೆ = ಭವದ ಬಟ್ಟೆ(ಮಾರ್ಗ) ತಪ್ಪಿಹೋದುದನು ನೋಡಿದೆ;
Written by: Sri Siddeswara Swamiji, Vijayapura