•  
  •  
  •  
  •  
Index   ವಚನ - 445    Search  
 
ನೆಲ ಹುಟ್ಟದಂದಿನ ಧವಳಾರ, ಧವಳಾರದೊಳಗೊಬ್ಬ ಸೂಳೆ ನೋಡಯ್ಯಾ. ತಲೆಯಿಲ್ಲದಾತ ನಿಚ್ಚಕ್ಕೆ ಬಪ್ಪ, ಕರುಳಿಲ್ಲದಾತ ಕುಂಟಿಣಿಯಾದ ನೋಡಯ್ಯಾ. ಕೈಕಾಲಿಲ್ಲದೆ ಅಪ್ಪಲೊಡನೆ! ಇದ ಕಂಡು ಬೆರಗಾದೆ ಗುಹೇಶ್ವರಾ.
Transliteration Nela huṭṭadandina dhavaḷāra, dhavaḷāradoḷagobba sūḷe nōḍayyā. Taleyilladāta niccakke bappa, karuḷilladāta kuṇṭiṇiyāda nōḍayyā. Kaikālillade appaloḍane! Ida kaṇḍu beragāde guhēśvarā.
Hindi Translation भूमि के प्रारंभ में भव्य भवन था; भव्य भवन में एक वेश्या थी देखो। बिना सिरवाला रोज आता था, बिना आँतवाला कुटना बना देखो , बिना हाथ पैर आलिंगन करे तो इसे देख चकित हुआ गुहेश्वरा। Translated by: Eswara Sharma M and Govindarao B N
Tamil Translation ஜட உணர்வுகளற்ற, பேரொளியுள்ள பிரம்ம மண்டலமாம் பிரம்ம மண்டலத்திலொரு ஞானசக்தியைக் காணாய் தலையற்ற அவன் நாள்தோறும் வருவான் மோகமற்ற அவன் உதவிசெய்தனன் காணாய் கைகால்களற்ற கணத்திலேயே சிவஉணர்வை எய்தினன் இதனைக் கண்டு நான் வியப்பெய்தினேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅದರೊಳಗೆ = ಆ ಮಂಡಲದೊಳಗೆ(ನೆಲೆಸಿದುದು); ಅಪ್ಪಲೊಡನೆ = ಆ ಶಿವಜ್ಞಾನಪ್ರಜ್ಞೆಯನು ಹೊಂದಿದ ಕ್ಷಣವೆ(ಶರಣನೆಲ್ಲ ಶಿವನಾಗುತ್ತಾನೆ. ಶರಣ-ಶಿವ ಎಂಬ ಭೇದ ಅಡಗಿಹೋಗುತ್ತದೆ); ಇದು ಕಂಡು = ಶರಣನ ಈ ಅದ್ಭುತಸಾಧನೆಯ ನೋಡಿ; ಒಬ್ಬ ಸೂಳೆ = ಶಿವ-ಶಕ್ತಿ, ಚಿಚ್ಛಕ್ತಿ; ಕರುಳಿಲ್ಲದಾತ = ನಿರ್ಮೋಹ ಮತ್ತು ನಿಶ್ಷಲವಾದ ಮನಸ್ಸು; ಕುಂಟಣಿಯಾದ = ಸಹಾಯಕನಾದನು, ಆ ಶರಣನಿಗೆ; ಕೈಕಾಲಿಲ್ಲದೆ = ಭೌತಿಕವಾದ ಕೈ ಹಾಗೂ ಕಾಲುಗಳು ಇಲ್ಲದೆ; ತಲೆಯಿಲ್ಲದಾತ = ಭಿನ್ನಬುದ್ದಿಯಿಲ್ಲದವ, ಜಡಬುದ್ದಿಯಿಲ್ಲದವ, ಶರಣ; ಧವಳಾರ = ಜ್ಯೋತಿರ್ಮಯ ಬ್ರಹ್ಮಮಂಡಲ; ನಿಚ್ಚಕ್ಕೆ = ನಿತ್ಯವೂ(ಕ್ರಮಕ್ರಮವಾಗಿ ಸಾಧನೆಗೈದು); ನೆಲ ಹುಟ್ಟದಂದಿನ = ಜಡಭಾವಗಳಿಗೆ ಅವಕಾಶವಿಲ್ಲದ; ಬಪ್ಪ = ಬರುತ್ತಾನೆ(ಬ್ರಹ್ಮಮಂಡಲವನ್ನು ಪ್ರವೇಶಿಸುತ್ತಾನೆ); ಬೆರಗಾದೆ = ಆಶ್ಚರ್ಯಚಕಿತನಾದೆ-ಎನ್ನುತ್ತಾರೆ ಅಲ್ಲಮರು; Written by: Sri Siddeswara Swamiji, Vijayapura