Index   ವಚನ - 14    Search  
 
ಉರಿಲಿಂಗದೇವ ನಿನ್ನನಗಲದ ಪರಿಯನು ಹೇಳಿಹೆನು, ಕೇಳಾ ನಿನಗೆ ಸಖಿಯೆ: ಉರಿಲಿಂಗದೇವ ಎಂಬುದೆ ಮಂತ್ರ, ಉರಿಲಿಂಗದೇವ ಎಂಬುದೆ ಯಂತ್ರ, ಉರಿಲಿಂಗದೇವ ಎಂಬುದೆ ತಂತ್ರ, ಉರಿಲಿಂಗದೇವ ಎಂಬುದೆ ವಶ್ಯ. ಉರಿಲಿಂಗದೇವಾ, ಉರಿಲಿಂಗದೇವಾ, ಎನ್ನುತ್ತಿದ್ದೇನೆ.