Index   ವಚನ - 33    Search  
 
ನಲ್ಲನ ಕೂಡುವ ಸುಖಭೋಗದ್ರವ್ಯವನೆಲ್ಲಿಂದ ತಪ್ಪೆನು ಹೇಳಾ ಕೆಳದಿ? ನಲ್ಲನ ಬೇಡಲು ನಾಚಿಕೆ ಎನಗೆ, ಮತ್ತೆಲ್ಲಿಯು ನಿಲ್ಲೆನು. ಕೂಡುವ [ಶಕ್ತಿ]ಯ ತಾನರಿದಿಹನು ಕೇಳಾ ಕೆಳದಿ. ಹೆಣ್ಣು ಹೆಣ್ಣ ಕೂಡುವ ಸುಖವ ಮಣ್ಣಿನಲ್ಲಿ ನೆರಹುವೆನು, ಉರಿಲಿಂಗದೇವನ ಕೂಡುವೆನು.