•  
  •  
  •  
  •  
Index   ವಚನ - 458    Search  
 
ಪೂರ್ವಬೀಜವು ಬ್ರಹ್ಮಚರ್ಯವೆ? ಅರಿವು ತಾ ಬ್ರಹ್ಮಚರ್ಯವೆ? ಜ್ಞಾನಾಜ್ಞಾನದುದಯ ತಾ ಬ್ರಹ್ಮಚರ್ಯವೆ? ಗುಹೇಶ್ವರಾ ನಿಮ್ಮ ಶರಣರ ಪರಿಣಾಮವೆ ಬ್ರಹ್ಮಚರ್ಯವು.
Transliteration Pūrvabījavu brahmacaryave? Arivu tā brahmacaryave? Jñānājñānadudaya tā brahmacaryave? Guhēśvarā nim'ma śaraṇara pariṇāmave brahmacaryavu.
Hindi Translation क्या पूर्व बीज ब्रह्मचर्य है? क्या ज्ञान खुद ब्रह्मचर्य है ? क्या ज्ञानाज्ञान उदय खुद ब्रह्म्चर्य है ? गुहेश्वरा, तुम्हारे शरणों का परिणाम ही ब्रह्मचर्य है| Translated by: Eswara Sharma M and Govindarao B N
Tamil Translation தூல உடல் பிரம்மசரியமோ? அறிவு பிரம்மசரியமோ? ஞான, அஞ்ஞானத்திற்குக் காரணமானது பிரம்மசரியமோ? குஹேசுவரனே, உம் சரணரின் பேரின்ப நிலையே பிரம்ம சரியமன்றோ! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿವು = ಐಂದ್ರಿಯಿಕ ಸಂವೇಧನೆಗಳನ್ನು ಗ್ರಹಿಸುವ, ಅರಿವ ಮನಸ್ಸು; ಜ್ಞಾನಾ ಜ್ಞಾನದುದಯ = ವಸ್ತುವಿನ ಜ್ಞಾನಕ್ಕೂ ಅಜ್ಞಾನಕ್ಕೂ ಕಾರಣವಾದ ಬುದ್ದಿ; ಪರಿಣಾಮ = ಲಿಂಗಾಂಗಸಾಮರಸ್ಯದಿಂದ ಉಂಟಾಗುವ ಆನಂದದ ಸ್ಥಿತಿ, ಆತ್ಮದ ಕೇವಲ ಸ್ವರೂಪ, ಕೈವಲ್ಯ; ಪೂರ್ವಬೀಜ = ಸ್ಥೂಲದೇಹ; ಬ್ರಹ್ಮಚರ್ಯ = ನಿರ್ವಿಕಾರ ಸ್ಥಿತಿ; ಬ್ರಹ್ಮಚರ್ಯ = ನಿಶ್ಚಲತೆ; ಬ್ರಹ್ಮಚರ್ಯ = ನಿರ್ಮಲತೆ; ಬ್ರಹ್ಮಚರ್ಯ = ಅಖಂಡ ಬ್ರಹ್ಮಸ್ಥಿತಿ, ಕೇವಲ ಆತ್ಮಾಸ್ತಿತ್ವ; Written by: Sri Siddeswara Swamiji, Vijayapura