Index   ವಚನ - 20    Search  
 
ಭಕ್ತರ ಭಾವದಲ್ಲಿ ಸುಳಿವ ಸುಳುಹು, ವಿರಕ್ತರ ಜ್ಞಾನದಲ್ಲಿ ಹೊಳೆವ ಕಳೆಯು, ನೀನೆಯಯ್ಯಾ! ಸೂರ್ಯನ ಬೆಳಗಿನೊಳಗೆ ಸಚರಾಚರಪ್ರಾಣಿಗಳು ಸುಳಿವಂತೆ, ನಮ್ಮ ಕಟ್ಟಿನ ನೇಮದ ನಿಷ್ಠೆ ನೀನೆಯಯ್ಯಾ. ಅಮರೇಶ್ವರಲಿಂಗದ ಒಡಲು ಸಂಗನಬಸವಣ್ಣನೆಂಬುದನು ಮಡಿವಾಳಮಾಚಿತಂದೆಗಳೆ ಬಲ್ಲರು ಕಾಣಾಸಂಗನಬಸವಣ್ಣಾ.