Index   ವಚನ - 21    Search  
 
ಭಕ್ತರಿಗೆ ಬಡತನವುಂಟೆ? ಸತ್ಯರಿಗೆ ಕರ್ಮವುಂಟೆ? ಚಿತ್ತ ಮುಟ್ಟಿ ಸೇವೆಯ ಮಾಡುವ ಭಕ್ತಂಗೆ ಮರ್ತ್ಯ ಕೈಲಾಸವೆಂಬುದುಂಟೆ? ಆತನಿದ್ದುದೆ ಸುಕ್ಷೇತ್ರ, ಆತನಂಗವೆ ಅಮರೇಶ್ವರಲಿಂಗದ ಸಂಗಸುಖ.