Index   ವಚನ - 24    Search  
 
ವಾರ ತಿಥಿ ಲಗ್ನಂಗಳೆಂದು ಬೇರೊಂದ ಮಾಡುವನ್ನಬರ ತ್ರಿವಿಧಪೂಜೆ ಕೆಟ್ಟಿತ್ತು. ಗುರುಲಿಂಗಜಂಗಮದ ಅನುವನರಿತುದೆ ನೇಮ. ಕಾಲ ಉಚಿತಕ್ಕೆ ಬಂದುದ ಕೂಡಿಕೊಂಬುದೆ ನಿತ್ಯ. ಈ ಗುಣ ಅಮರೇಶ್ವರಲಿಂಗವ ಕೂಡುವ ಕೂಟ.