Index   ವಚನ - 29    Search  
 
ಸ್ಥಾವರದ ಒಡಲಿಗೆ ಕಟ್ಟಿದ ತೊಗಲಿನಂತೆ, ಆರು ಮುಟ್ಟಿದರು ಮುಟ್ಟಿಂಗೊಳಗಾಗಿ ತೋರುತ್ತಿಪ್ಪುದು ದನಿ. ಅದು ಮೂರು ತಂತ್ರದ ಭೇದ. ಆ ತ್ರಿವಿಧಭೇದವನರಿಯಬಲ್ಲಡೆ, ಅಮರೇಶ್ವರಲಿಂಗವನರಿದುದು.