Index   ವಚನ - 2    Search  
 
ಅಪ್ಪುವಿನ ಸಂಯೋಗದಿಂದ ಮೃತ್ತಿಕೆ ಮಡಕೆಯಾಗಿ, ಮತ್ತೆ ಅಪ್ಪುವಿನೊಡಗೂಡಿ ತುಂಬಲಿಕ್ಕಾಗಿ, ಮತ್ತಾ ಅಪ್ಪುವಿನ ದ್ರವಕ್ಕೆ ಮೃತ್ತಿಕೆ ಕರಗಿದುದಿಲ್ಲ. ಅದೇತಕ್ಕೆ? ಅನಲ ಮುಟ್ಟಿದ ದೆಸೆಯಿಂದ. ಅದು ಕಾರಣ, ಇಂತೀ ವಸ್ತುವಿನ ದೆಸೆಯಿಂದ ಸತ್ಕ್ರಿಯಾಮಾರ್ಗಂಗಳು ಭವದ ತೊಟ್ಟುಬಿಟ್ಟವು. ಇಂತೀ ದೃಷ್ಟವರಿದು ಸರ್ವಕ್ರೀಗಳೆಲ್ಲವೂ ವಸ್ತುವ ಮುಟ್ಟಲಿಕ್ಕಾಗಿ ಪೂರ್ವಗುಣ ತನ್ನಷ್ಟವಾಯಿತ್ತು, ಭೋಗಬಂಕೇಶ್ವರಲಿಂಗವನರಿದ ಕಾರಣ.